ಪುಣೆ: ಕೊರೊನಾ ವೈರಸ್ನಿಂದ ಗುಣಮುಖರಾದ 193 ಜನರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಇದರಲ್ಲಿ 27 ದಿನದ ಮಗು ಇರುವುದು ಸಹ ಒಂದು ವಿಶೇಷ.
ಕೊರೊನಾ ಗೆದ್ದು ಬಂದ 27 ದಿನದ ಮಗು! - ಕೋವಿಡ್ನಿಂದ 27 ದಿನದ ಮಗು ಗುಣಮುಖ
ಕೊರೊನಾ ವೈರಸ್ನಿಂದ ಬಳಲುತ್ತಿದ್ದ 27 ದಿನದ ಮಗು ಸಂಪೂರ್ಣ ಗುಣಮುಖವಾಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
![ಕೊರೊನಾ ಗೆದ್ದು ಬಂದ 27 ದಿನದ ಮಗು! 27 day old baby cured, 27 day old baby cured form Covid 19, 27 day old baby cured form Covid 19 in Pune, 27 ದಿನದ ಮಗು ಗುಣಮುಖ, ಕೋವಿಡ್ನಿಂದ 27 ದಿನದ ಮಗು ಗುಣಮುಖ, ಪುಣೆಯಲ್ಲಿ ಕೋವಿಡ್ನಿಂದ 27 ದಿನದ ಮಗು ಗುಣಮುಖ,](https://etvbharatimages.akamaized.net/etvbharat/prod-images/768-512-7691454-211-7691454-1592605064822.jpg)
ಸಂಗ್ರಹ ಚಿತ್ರ
ಹೌದು, ಹದಪ್ಸರ್ ಗ್ರಾಮಕ್ಕೆ ಸೇರಿರುವ ಈ ಮಗು ಪುಣೆಯ ಆಸ್ಪತ್ರೆಯೊಂದರಲ್ಲಿ ಮೇ 20ರಂದು ಜನಸಿತ್ತು. ಆಗ ತಾನೇ ಜನಿಸಿದ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಮಗುವಿನಲ್ಲಿ ಕೊರೊನಾ ಸೋಂಕು ಹರಡಿರುವುದು ದೃಢವಾಗಿತ್ತು. ಚಿಕಿತ್ಸೆ ಬಳಿಕ ಮತ್ತೆ ಕೊರಾನಾ ಪರೀಕ್ಷೆಗೆ ಒಳಪಡಿಸಿದಾಗ ಸಂಪೂರ್ಣ ಗುಣಮುಖವಾಗಿರುವುದು ಬೆಳಕಿಗೆ ಬಂದಿದೆ.
ಇನ್ನು ಈ ಮಗುವಿನೊಂದಿಗೆ ನಿನ್ನೆ 193 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಇಲ್ಲಿಯವರೆಗೆ ಪುಣೆ ನಗರದಲ್ಲಿ 6,906 ಜನರು ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.