ಕರ್ನಾಟಕ

karnataka

ETV Bharat / bharat

ಮುಂಬೈ ದಾಳಿಯ ಪ್ರಮುಖ ಸಾಕ್ಷಿ ದೇವಿಕಾಗೆ ಆರ್ಥಿಕ ಸಂಕಷ್ಟ: ಸೌಲಭ್ಯಕ್ಕಾಗಿ ಹೈಕೋರ್ಟ್​ಗೆ ಅರ್ಜಿ - ದೇವಿಕಾ ರೋಟವಾನ್

ಮುಂಬೈ ದಾಳಿಯ ಸಂದರ್ಭದಲ್ಲಿ ಪ್ರಮುಖ ಸಾಕ್ಷಿದಾರರಾಗಿದ್ದ ದೇವಿಕಾ ರೋಟವಾನ್ ತೀವ್ರ ಆರ್ಥಿಕ ಒತ್ತಡದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇ ಡಬ್ಲ್ಯೂಎಸ್ ಯೋಜನೆಯಡಿ ಮನೆ ಒದಗಿಸುವ ಭರವಸೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದೇವಿಕಾ ರೋಟವಾನ್
ದೇವಿಕಾ ರೋಟವಾನ್

By

Published : Aug 26, 2020, 12:41 PM IST

Updated : Aug 26, 2020, 1:09 PM IST

ಮುಂಬೈ: 26/11 ಮುಂಬೈ ದಾಳಿಯಲ್ಲಿ ಬದುಕುಳಿದವರಲ್ಲಿ ಒಬ್ಬರಾದ ದೇವಿಕಾ ರೋಟವಾನ್ ತೀವ್ರ ಆರ್ಥಿಕ ಒತ್ತಡದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಯೋಜನೆಯಡಿ ಮನೆ ಒದಗಿಸುವ ಭರವಸೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತನ್ನ ಕುಟುಂಬಕ್ಕೆ ಮನೆ ಮತ್ತು ಶಿಕ್ಷಣವನ್ನು ನೀಡಲು ಅವಕಾಶ ಕಲ್ಪಿಸುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವಾರ ಅರ್ಜಿಯ ವಿಚಾರಣೆ ನಡೆಯಲಿದೆ.

ದೇವಿಕಾ ಅವರು ನವೆಂಬರ್ 26, 2011ರಂದು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಲ್ದಾಣದಲ್ಲಿದ್ದರು. ಈ ವೇಳೆ, ನಡೆದ ಮುಂಬೈ ದಾಳಿಯನ್ನು ಕಣ್ಣಾರೆ ಕಂಡಿದ್ದಾರೆ. ಅಷ್ಟೇ ಅಲ್ಲದೆ, ಆ ದಾಳಿಯಲ್ಲಿ ಕಾಲಿಗೆ ಗುಂಡೇಟು ತಗುಲಿ 6 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಆ ಬಳಿಕ ಸುಮಾರು 6 ತಿಂಗಳ ಕಾಲ ಹಾಸಿಗೆ ಹಿಡಿದಿದ್ದರು.

ಆಸ್ಪತ್ರೆಯಲ್ಲಿದ್ದ ಸಮಯದಲ್ಲಿ, ಅನೇಕ ಸರ್ಕಾರಿ ಅಧಿಕಾರಿಗಳು ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಡಬ್ಲ್ಯೂಎಸ್ ಯೋಜನೆಯಡಿ ವಸತಿ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಆ ಸೌಲಭ್ಯಗಳು ಇನ್ನೂ ಒದಗಿಸಿಲ್ಲ ಎಂದು ದೇವಿಕಾ ಹೇಳುತ್ತಾರೆ.

"ನಾನು ಲಾಕ್​ಡೌನ್ ಅವಧಿಯ ನಂತರ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನಾನು ಮಹಾರಾಷ್ಟ್ರ ಸರ್ಕಾರದಿಂದ ಬೆಂಬಲವನ್ನು ಪಡೆಯುತ್ತೇನೆ. ನನಗೆ ಮನೆ ಮತ್ತು ಎಲ್ಲಾ ಸಹಾಯವನ್ನು ನೀಡಲಾಗುವುದು ಎಂದು ಸರ್ಕಾರದಿಂದ ನನಗೆ ತಿಳಿಸಲಾಯಿತು. ಆದರೆ ಅದು ಇನ್ನೂ ಲಭ್ಯವಾಗಿಲ್ಲ. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು 10 ಲಕ್ಷ ರೂ. ಗಳನ್ನು ಪರಿಹಾರವಾಗಿ ನೀಡಿದ್ದರು. ಆದರೆ ಅದು ನನ್ನ ಕ್ಷಯರೋಗದ (ಟಿಬಿ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು. ಅದಕ್ಕಾಗಿ ನಾನು ಅಭಾರಿಯಾಗಿದ್ದೇನೆ. ಆದರೆ ಅದಕ್ಕೂ ಮೊದಲು ನನಗೆ ನೀಡಿದ ಭರವಸೆಗಳು ಇನ್ನೂ ಈಡೇರಿಲ್ಲ "ಎಂದು ದೇವಿಕಾ ರೋಟವಾನ್ ಹೇಳಿದ್ದಾರೆ.

"ನನ್ನ ಕುಟುಂಬ ಮತ್ತು ನನಗಾಗಿ ಮನೆ ವ್ಯವಸ್ಥೆ ಮಾಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ಏಕೆಂದರೆ ಬಾಡಿಗೆ ಪಾವತಿಸಲು ಸಾಧ್ಯವಾಗದಿದ್ದರೆ, ನಾನು ಬೇರೆಲ್ಲಿಯಾದರೂ ಮನೆ ಹುಡುಕುವಂತೆ ನನ್ನ ಮನೆ ಮಾಲೀಕರು ಹೇಳಿದ್ದಾರೆ" ಎಂದು ಅವರು ಹೇಳಿದರು.

"ನನ್ನ ತಂದೆ ಹಿರಿಯ ನಾಗರಿಕ. ನನ್ನ ಸಹೋದರನ ಬೆನ್ನೆಲುಬಿಗೆ ಮೂರು ಶಸ್ತ್ರಚಿಕಿತ್ಸೆಗಳಾಗಿವೆ. ಇದೀಗ ನನ್ನ ಜಮೀನುದಾರನು ಬಲವಂತವಾಗಿ ಮನೆಯಿಂದ ಹೊರಹಾಕುವಂತೆ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದಾನೆ. ಹೀಗಾಗಿ ನಾನು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಆದರೆ, ಮಹಾರಾಷ್ಟ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ನನಗೆ ಆದಾಯದ ಮೂಲಗಳಿಲ್ಲ. ಆದ್ದರಿಂದ ಬೇರೆ ದಾರಿಯಿಲ್ಲದೇ ನಾನು ಸಹಾನುಭೂತಿಯ ಆಧಾರದ ಮೇಲೆ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದೇನೆ "ಎಂದು ಅವರು ಹೇಳಿದರು.

ಕಸಬ್​ ವಿಚಾರಣೆಯ ಸಮಯದಲ್ಲಿ, ಆತನ ವಿರುದ್ಧ ಸಾಕ್ಷಿ ಹೇಳುವಲ್ಲಿ ದೇವಿಕಾ ಪ್ರಮುಖ ಪಾತ್ರ ವಹಿಸಿದ್ದರು.

Last Updated : Aug 26, 2020, 1:09 PM IST

ABOUT THE AUTHOR

...view details