ಜಮ್ಮು:ಅಮರನಾಥ ಯಾತ್ರೆಗೆ ಇಂದು 1137 ಮಹಿಳೆಯರು ಮತ್ತು 260 ಸಾಧುಗಳು ಸೇರಿದಂತೆ ಒಟ್ಟು 4158 ಯಾತ್ರಿಗಳ 20ನೇ ತಂಡ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 1ರಂದು ಆರಂಭವಾದ 46 ದಿನಗಳ ಯಾತ್ರೆ ಪ್ರಯುಕ್ತ ಶನಿವಾರ ಸಂಜೆಯ ತನಕ 2,59,889 ಯಾತ್ರಿಕರು ಶಿವ ದೇಗುಲಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಯಾತ್ರೆ ಆಗಸ್ಟ್ 15ಕ್ಕೆ ಮುಕ್ತಾಯಗೊಳ್ಳಲಿದ್ದು, ಕಾಕತಾಳೀಯ ಎಂಬಂತೆ ಅಂದೇ ರಕ್ಷಾ ಬಂಧನ ಹಬ್ಬವೂ ಇದೆ ಎಂದು ಹೇಳಿದ್ದಾರೆ.
ಬಿಗಿ ಭದ್ರತೆಯೊಂದಿಗೆ 156 ವಾಹನಗಳಲ್ಲಿ ಭಗವತಿ ನಗರದಿಂದ 20ನೇ ತಂಡವನ್ನು ಕರೆದೊಯ್ಯಲಾಗುತ್ತಿದೆ. ಅದರಲ್ಲಿ ಬಾಲ್ಟಾಲ್ ಮಾರ್ಗದಿಂದ ಯಾತ್ರೆ ಕೈಗೊಳ್ಳಲು 751 ಮಹಿಳೆಯರು, 16 ಮಕ್ಕಳು ಸೇರಿದಂತೆ 2139 ಯಾತ್ರಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. 386 ಮಹಿಳೆಯರು, ಮೂವರು ಮಕ್ಕಳು ಮತ್ತು 260 ಸಾಧುಗಳು ಪಾಲಾಗ್ರಾಮ್ನಿಂದ ಯಾತ್ರೆ ಕೈಗೊಳ್ಳಲು ಅಲ್ಲಿಗೆ ಆಗಮಿಸುತ್ತಿದ್ದಾರೆ. ಅಮರನಾಥ ಗುಹೆಯ ಬಳಿಗೆ ಹೋಗಲು ಬಾಲ್ಟಾಲ್ನಿಂದ 14 ಕಿ.ಮೀ. ಮತ್ತು ಪಾಲಾಗ್ರಾಮ್ನಿಂದ 36 ಕಿ.ಮೀ. ಆಗಲಿದೆ.
ಅಂಕಿ ಅಂಶ
ವರ್ಷವಾರು | ಭೇಟಿ ಕೊಟ್ಟ ಯಾತ್ರಿಕರು |
2015 | 3,52,771 |
2016 | 3,20,490 |
2017 | 2,60,003 |
2018 | 2,85,006 |
2019 | 2,59,889 (ಜುಲೈ 20 ಅಂತ್ಯಕ್ಕೆ) |