ನವದೆಹಲಿ: ಕೊರೊನಾ ಪ್ರೇರಿತ ಲಾಕ್ಡೌನ್ನಿಂದಾಗಿ ಹೊರ ರಾಜ್ಯಗಳಲ್ಲಿ ಸಿಲುಕಿದ್ದ ವಲಸಿಗರನ್ನು ಕರೆತರಲು 4,040 ಶ್ರಮಿಕ್ ವಿಶೇಷ ರೈಲಗಳು ಸಂಚಾರ ನಡೆಸಿವೆ. ಈ ಪೈಕಿ 256 ರೈಲುಗಳ ಸಂಚಾರವನ್ನು ನಾಲ್ಕು ರಾಜ್ಯಗಳು ಸ್ಥಗಿತಗೊಳಿಸಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ನಾಲ್ಕು ರಾಜ್ಯಗಳಿಂದ 256 ಶ್ರಮಿಕ್ ರೈಲು ರದ್ದು: ರೈಲ್ವೆ ಇಲಾಖೆ - 256 ಶ್ರಮಿಕ್ ರೈಲು ಕ್ಯಾನ್ಸಲ್
ಅನ್ಯ ರಾಜ್ಯಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರನ್ನು ತವರಿಗೆ ಕರೆ ತರಲು ಶ್ರಮಿಕ್ ರೈಲಿನ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಆದರೆ ಮೇ 1ರಿಂದ ಕರ್ನಾಟಕ ಸೇರಿದಂತೆ ಇನ್ನಿತರ ಮೂರು ರಾಜ್ಯಗಳು 256 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿವೆ.
ರೈಲ್ವೆ ಇಲಾಖೆ
ಮೇ 1ರಿಂದ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಉತ್ತರ ಪ್ರದೇಶ ಸರ್ಕಾರಗಳು ವಿಶೇಷ ಶ್ರಮಿಕ್ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿವೆ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಮಹಾರಾಷ್ಟ್ರ 105 ರೈಲುಗಳು, ಗುಜರಾತ್ 47, ಕರ್ನಾಟಕ 38 ಮತ್ತು ಉತ್ತರ ಪ್ರದೇಶ 30 ರೈಲುಗಳನ್ನು ರದ್ದುಪಡಿಸಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.