ನವದೆಹಲಿ:ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಈ ಹಿಂದಿನ ಎಲ್ಲ ಪ್ರಧಾನಿ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇದೀಗ ಕಳೆದ ಮೂರು ವರ್ಷದಲ್ಲಿ ಮೋದಿ ಪಾರಿನ್ ಟೂರ್ಗೆ ಆದ ಖರ್ಚಿನ ವಿವರವನ್ನು ವಿದೇಶಾಂಗ ಇಲಾಖೆ ಬಹಿರಂಗಪಡಿಸಿದೆ.
3 ವರ್ಷದಲ್ಲಿ ಮೋದಿ ಫಾರಿನ್ ಟೂರ್ ಖರ್ಚು ₹255 ಕೋಟಿ..! - ಮೋದಿ ಫಾರಿನ್ ಟೂರ್ ಸುದ್ದಿ
ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ವಿದೇಶಾಂಗ ಇಲಾಖೆ ರಾಜ್ಯಖಾತೆ ಸಚಿವ ವಿ.ಮುರಳೀಧರನ್, ಪ್ರಧಾನಿ ಮೋದಿಯ ಕಳೆದ 3 ವರ್ಷದ ವಿದೇಶ ಪ್ರವಾಸಕ್ಕೆ ₹255 ಕೋಟಿ ಖರ್ಚಾಗಿದೆ ಎಂದು ಹೇಳಿದ್ದಾರೆ
ಮೋದಿ ಫಾರಿನ್ ಟೂರ್
ರಾಜ್ಯಸಭೆಯಲ್ಲಿ ಮಾತನಾಡುವ ವೇಳೆ ವಿದೇಶಾಂಗ ಇಲಾಖೆಯ ರಾಜ್ಯಖಾತೆ ಸಚಿವ ವಿ.ಮುರಳೀಧರನ್ ಅವರು, ಪ್ರಧಾನಿ ಮೋದಿ ಅವರ, ಕಳೆದ 3 ವರ್ಷದ ವಿದೇಶ ಪ್ರವಾಸಕ್ಕೆ ₹255 ಕೋಟಿ ಖರ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.
2016-17ರಲ್ಲಿ ₹76.27 ಕೋಟಿ, 2017-18ರಲ್ಲಿ ₹99.32 ಕೋಟಿ ಹಾಗೂ 2018-19ರಲ್ಲಿ ₹79.91 ಕೋಟಿ ಖರ್ಚಾಗಿದೆ. 2019-20 ಖರ್ಚಿನ ವಿವರ ಇನ್ನೂ ಲಭ್ಯವಾಗಿಲ್ಲ ಎಂದು ಮುರಳೀಧರನ್ ಹೇಳಿದ್ದಾರೆ.