ಕರ್ನಾಟಕ

karnataka

ETV Bharat / bharat

ವಾಘಾ ಗಡಿ ಮೂಲಕ 250 ನಿವಾಸಿಗಳು ಪಾಕ್​​​​​​​ನಿಂದ ವಾಪಸ್ - ಲಾಕ್‌ಡೌನ್‌

ಲಾಕ್‌ಡೌನ್‌ ಘೋಷಣೆಗಿಂತ ಮುಂಚಿತವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಮತ್ತು ಅಲ್ಲಿ ಉಳಿದುಕೊಂಡಿದ್ದ ಭಾರತೀಯ ನಾಗರಿಕರಲ್ಲಿ 748 ಜನರು ಮುಂದಿನ ಮೂರು ದಿನಗಳಲ್ಲಿ ಅತ್ತಾರಿ - ವಾಘಾ ಗಡಿಯ ಮೂಲಕ ಭಾರತಕ್ಕೆ ವಾಪಸ್​​ ಆಗಲಿದ್ದಾರೆ.

ಅತ್ತಾರಿ-ವಾಗಾ ಗಡಿ
ಅತ್ತಾರಿ-ವಾಗಾ ಗಡಿ

By

Published : Jun 26, 2020, 7:42 AM IST

ಅಮೃತಸರ (ಪಂಜಾಬ್): ಜಮ್ಮು ಮತ್ತು ಕಾಶ್ಮೀರದ 250 ನಿವಾಸಿಗಳ ತಂಡ ಗುರುವಾರ ಅಮೃತಸರದ ಅತ್ತಾರಿ - ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಮೃತಸರದ ಎಸ್‌ಡಿಎಂ -2 ಶಿವರಾಜ್ ಸಿಂಗ್ ಬಾಲ್, "748 ಭಾರತೀಯರು ದೇಶಕ್ಕೆ ಮರಳಲು ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ 250 ಜಮ್ಮು ಮತ್ತು ಕಾಶ್ಮೀರದ ಜನರಿದ್ದು, ಅವರೆಲ್ಲ ಇಂದು ಸ್ವದೇಶಕ್ಕೆ ಮರಳಿದ್ದಾರೆ" ಎಂದು ಹೇಳಿದರು.

"250 ಜನರು ಇಂದು ಹಿಂದಿರುಗಿದ್ದು, ಮತ್ತೆ ನಾಳೆ 248 ಜನರ ತಂಡ ಸ್ವದೇಶಕ್ಕೆ ವಾಪಸ್​ ಆಗಲಿದೆ ಎಂದು ಮಾಹಿತಿ ನೀಡಿದರು.

ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ, ಭಾರತ ಮತ್ತು ಪಾಕಿಸ್ತಾನ ಇತರ ದೇಶಗಳಂತೆ ತಮ್ಮ ಗಡಿಗಳಿಗೆ ನಿರ್ಬಂಧ ಹಾಕಿದ್ದವು.

ಲಾಕ್‌ಡೌನ್‌ ಘೋಷಣೆಗಿಂತ ಮುಂಚಿತವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಮತ್ತು ಅಲ್ಲಿ ಉಳಿದುಕೊಂಡಿದ್ದ ಭಾರತೀಯ ನಾಗರಿಕರಲ್ಲಿ 748 ಜನರು ಮುಂದಿನ ಮೂರು ದಿನಗಳಲ್ಲಿ ಅತ್ತಾರಿ - ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಲಿದ್ದಾರೆ.

ಇಂದು ಮರಳಿದ ನಿವಾಸಿಗಳನ್ನು ಕರೆದೊಯ್ಯಲು ಜಮ್ಮು ಮತ್ತು ಕಾಶ್ಮೀರ ಆಡಳಿತವು ವಿಶೇಷ ಬಸ್​​​ಗಳನ್ನ ಕಳುಹಿಸಿದೆ. ಅವರು ಕೇಂದ್ರ ಸ್ಥಾನವನ್ನ ತಲುಪಿದ ನಂತರ ಕ್ವಾರಂಟೈನ್​​ ಮಾಡಲಾಗುತ್ತದೆ ಎಂದು ತಿಳಿಸಿದರು.

ABOUT THE AUTHOR

...view details