ಕುಲು(ಹಿಮಾಚಲ ಪ್ರದೇಶ):ಸುಮಾರು ಅರವತ್ತಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಬಸ್ ಕುಲು ಜಿಲ್ಲೆಯ ಬಂಜಾರ್ ಪ್ರದೇಶದಲ್ಲಿ ಸುಮಾರು 500 ಅಡಿಗಳಷ್ಟು ಆಳದ ಪ್ರಪಾತಕ್ಕೆ ಬಿದ್ದಿದೆ. ಪರಿಣಾಮ ಸುಮಾರು 43 ಮಂದಿ ಸಾವನ್ನಪ್ಪಿದ್ದಾರೆ.
500 ಅಡಿ ಪ್ರಪಾತಕ್ಕೆ ಬಿದ್ದ ಖಾಸಗಿ ಬಸ್! ಕನಿಷ್ಠ 43 ಸಾವು, 25 ಮಂದಿಗೆ ಗಾಯ - ಕುಲು
ಕುಲು ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತದ ವೇಳೆ ಅನೇಕ ಪ್ರಯಾಣಿಕರು ಬಸ್ ಮೇಲ್ಭಾಗದಲ್ಲಿ ಕುಳಿತಿದ್ದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.
ಪ್ರಪಾತ
ಹತ್ತಾರು ಪ್ರಯಾಣಿಕರು ಬಸ್ ಮೇಲ್ಭಾಗದಲ್ಲಿ ಪ್ರಯಾಣಿಸುತ್ತಿದ್ದ ಪರಿಣಾಮ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ.
ದುರ್ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಪ್ರಪಾತಕ್ಕೆ ಬಿದ್ದಿರುವ ಬಸ್ ಬಂಜಾರ್ನಿಂದ ಗಡಾಗುಶಾನಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
Last Updated : Jun 20, 2019, 11:26 PM IST