ಕರ್ನಾಟಕ

karnataka

ETV Bharat / bharat

ಒಡಿಶಾದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಂಭವಿಸಿದ ಆನೆಗಳ ಸಾವಿನ ಸಂಖ್ಯೆ ಇದು! - ಒಡಿಸ್ಸಾದಲ್ಲಿ 1976 ಆನೆ

ಕಳೆದ ಮೂರು ವರ್ಷಗಳಲ್ಲಿ ಒಡಿಶಾದಲ್ಲಿ ಆನೆಗಳ ಮಾರಣಹೋಮವೇ ನಡೆದಿದೆ. ಈ ಬಗ್ಗೆ ಅರಣ್ಯ ಮತ್ತು ಪರಿಸರ ಸಚಿವ ಬಿಕ್ರಮ್ ಕೇಶರಿ ಅರುಖ್ ಮಂಗಳವಾರ ಅಲ್ಲಿನ ವಿಧಾನಸಭೆಯಲ್ಲಿ ನೀಡಿದ ಮಾಹಿತಿ ಆತಂಕ ಹುಟ್ಟಿಸುವಂತಿದೆ.

246-elephants-died-in-odisha-in-last-3-years-minister
ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 246 ಆನೆಗಳು ಸಾವು

By

Published : Feb 19, 2020, 1:17 PM IST

Updated : Feb 19, 2020, 1:34 PM IST

ಭುವನೇಶ್ವರ್​(ಒಡಿಶಾ): ಕಳೆದ ಮೂರು ವರ್ಷಗಳಲ್ಲಿ ಒಡಿಶಾದಲ್ಲಿ 246 ಆನೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಮತ್ತು ಪರಿಸರ ಸಚಿವ ಬಿಕ್ರಮ್ ಕೇಶರಿ ಅರುಖ್ ಅಲ್ಲಿನ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಆಹಾರಕ್ಕಾಗಿ ಹವಣಿಸುತ್ತಿರುವ ಆನೆ (ಸಂಗ್ರಹ ಚಿತ್ರ)

ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಮುಖೇಶ್ ಮಹಾಲಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2016- 17 ಹಾಗೂ 2018-19 ರ ನಡುವಿನ ಅವಧಿಯಲ್ಲಿ ಅಪಘಾತ, ವಿದ್ಯುತ್​​ ಆಘಾತ ಹಾಗೂ ನೈಸರ್ಗಿಕ ದುರಂತಗಳಿಂದ ಆನೆಗಳು ಸಾವನ್ನಪ್ಪಿವೆ ಎಂದಿದ್ದಾರೆ.

2017 ರ ಗಣತಿಯ ಪ್ರಕಾರ, ರಾಜ್ಯದಲ್ಲಿ 1976 ಆನೆಗಳಿವೆ. ಇದರಲ್ಲಿ ಸಿಮ್ಲಿಪಾಲ್ ಅರಣ್ಯ ವಿಭಾಗದಲ್ಲಿ ಸುಮಾರು 330 ಆನೆಗಳು, ಧೇಂಕನಾಲ್ ಅರಣ್ಯದಲ್ಲಿ 169, ಸತಕೋಸಿಯಾ(147) ಮತ್ತು ಆತಘರ್​​ನಲ್ಲಿ (115) ಕಂಡುಬಂದಿವೆ. ಇಲ್ಲಿಯವರೆಗೆ ಆನೆಗಳ ರಕ್ಷಣೆಗೆ ರಾಜ್ಯ ಸರ್ಕಾರ ಹಲವಾರು ಕ್ರಮವನ್ನು ಕೈಗೊಂಡಿದೆ ಎಂದಿದ್ದಾರೆ.

ಸಂಗ್ರಹ ಚಿತ್ರ

ಆನೆಗಳ ಪ್ರಮುಖ ವಾಸಸ್ಥಾನಗಳನ್ನು ರಕ್ಷಿಸುವ ಉದ್ದೇಶದಿಂದಾಗಿ ಮಯೂರ್‌ಭಂಜ್, ಸಂಬಲ್‌ಪುರ ಮತ್ತು ಮಹಾನದಿಗಳಲ್ಲಿ ಜಂಬೋ ಮೀಸಲು ಸ್ಥಾಪನೆ ಸೇರಿದಂತೆ ಆನೆ ಸಂರಕ್ಷಣೆಗಾಗಿ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಅಲ್ಲದೇ 14 ಆನೆ ಕಾರಿಡಾರ್ ನಿರ್ಮಾಣ, ಜಲಮೂಲಗಳು ಮತ್ತು ಆಹಾರಕ್ಕಾಗಿ ಗಿಡ ನೆಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

Last Updated : Feb 19, 2020, 1:34 PM IST

ABOUT THE AUTHOR

...view details