ಕರ್ನಾಟಕ

karnataka

ETV Bharat / bharat

ವಿಶೇಷ ವಿಮಾನದಲ್ಲಿ ಲಂಡನ್‌ನಿಂದ ಅಮೃತಸರಕ್ಕೆ ಬಂದಿಳಿದ 242 ಪ್ರಯಾಣಿಕರು! - ಲಂಡನ್‌ನಿಂದ ಪಂಜಾಬ್‌ನ ಅಮೃತಸರ ವಿಮಾನ ನಿಲ್ದಾಣಕ್ಕೆ 242 ಪ್ರಯಾಣಿಕರ ಆಗಮನ ಸುದ್ದಿ

ಇಂದು ಲಂಡನ್​ನಿಂದ ಬಂದ ವಿಶೇಷ ವಿಮಾನದಲ್ಲಿ ಸುಮಾರು 242 ಪ್ರಯಾಣಿಕರು ಪಂಜಾಬ್​ನ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ವಿದೇಶದಿಂದ ಆಗಮಿಸಿದ ಪ್ರತಿಯೊಬ್ಬರು ಆರ್‌ಟಿ - ಪಿಸಿಟಿ ಪರೀಕ್ಷೆಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.

242 passengers arrived amritsar of punjab from london in special aircraft
ಲಂಡನ್‌ನಿಂದ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿದ 242 ಪ್ರಯಾಣಿಕರು

By

Published : Dec 22, 2020, 4:40 PM IST

ಪಂಜಾಬ್​: ಇಂದು ಲಂಡನ್​ನಿಂದ ಆಗಮಿಸಿದ ವಿಶೇಷ ವಿಮಾನ ನಿಲ್ದಾಣದಲ್ಲಿ ಒಟ್ಟು 242 ಪ್ರಯಾಣಿಕರು ಅಮೃತಸರ ಏರ್​​ಪೋರ್ಟ್​​ಗೆ ಬಂದಿಳಿದಿದ್ದಾರೆ.

ಲಂಡನ್​ನಿಂದ ಭಾರತಕ್ಕೆ ಬಂದ ಪ್ರಯಾಣಿರು ವಿಮಾನ ಹತ್ತುವ ಸ್ವಲ್ಪ ಮುಂಚೆ ಕೊರೊನಾ ಟೆಸ್ಟ್​ ಮಾಡಿಸಿದ್ದರೂ ಸಹ ವಿಮಾನದಿಂದ ಇಳಿದ ಮೇಲೂ ಕೋವಿಡ್​ ಟೆಸ್ಟ್​ಗೆ ಒಳಗಾಗುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಲಂಡನ್‌ನಿಂದ ಪಂಜಾಬ್‌ನ ಅಮೃತಸರಕ್ಕೆ ಬಂದಿಳಿದ 242 ಪ್ರಯಾಣಿಕರು

ಲಂಡನ್​​ನಿಂದ ಬಂದ ಈ ವಿಶೇಷ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಆಗಮಿಸಿದ್ದಾರೆ. ಅವರು ಆರ್‌ಟಿ - ಪಿಸಿಟಿ ಪರೀಕ್ಷೆಗೆ ಒಳಗಾಗಬೇಕಾಗಿದ್ದು, ಈ ಟೆಸ್ಟ್​ 6-8 ಗಂಟೆ ತೆಗೆದುಕೊಳ್ಳುವುದರಿಂದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಇರಬೇಕಾಗುತ್ತದೆ ಎಂದು ಅಮೃತಸರ ಏರ್​​ಪೋರ್ಟ್​​ನ ಅಧಿಕಾರಿ ದೀಪಕ್ ಭಾಟಿಯಾ ತಿಳಿಸಿದ್ದಾರೆ. ಹೀಗಾಗಿ ತಮ್ಮವರನ್ನು ಕರೆದೊಯ್ಯಲು ಬಂದ ಜನರು ಕೂಡ ವಿಮಾನ ನಿಲ್ದಾಣದ ಬಳಿಯೇ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಎದುರಾಗಿದೆ. ಅಮೃತಸರ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಜನರು ನೆರೆದಿದ್ದ ದೃಶ್ಯ ಕಂಡು ಬಂತು. ಇದೇ ವೇಳೆ, ಕೆಲವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ಘಟನೆಯೂ ನಡೆದಿದೆ.

ಬ್ರಿಟನ್​ನಲ್ಲಿ ಕೊರೊನಾ ವೈರಸ್ ರೂಪಾಂತರವಾಗಿರುವುದು ಪತ್ತೆಯಾಗಿರುವ ಹಿನ್ನೆಲೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ರೂಪಾಂತರವಾದ ಕೊರೊನಾ ಭಾರತಕ್ಕೆ ಹರಡದಂತೆ ತಡೆಯಲು ಬ್ರಿಟನ್​ನಿಂದ ಭಾರತಕ್ಕೆ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ABOUT THE AUTHOR

...view details