ಮುಂಬೈ/ಮಹಾರಾಷ್ಟ್ರ :ಪ್ರೇಯಸಿಗೆ ಗುಂಡು ಹಾರಿಸಿ ಪ್ರಿಯಕರನೊಬ್ಬ ತಾನೂ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಪ್ರಕರಣ ಮಲಾಡ್ ಏರಿಯಾ ಬಂಗೂರ್ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ 24 ಯುವತಿ ಹಾಗೂ 25 ವರ್ಷದ ಯುವಕ ಇಬ್ಬರೂ ಕಂಡಿವಲಿಯ ಘಾನೋಕರ್ ವಾಡಿ ನಿವಾಸಿಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗ್ತಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಶಾಪಿಂಗ್ ಮಾಲ್ವೊಂದರ ಬಳಿ ಪ್ರಿಯಕರ ಯುವತಿಗೆ ಗುಂಡು ಹಾರಿಸಿ, ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ಮೃತದೇಹಗಳನ್ನು ಶತಾಬ್ಧಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಚಿವ ದಿಲೀಪ್ ಅಸ್ಲಾಮ್ ಶೇಖ್ ನೀಡಿದ್ದಾರೆ.