ಎರ್ನಾಕುಲಂ(ಕೇರಳ):ಕರಾವಳಿಯ ಸಮುದ್ರದಲ್ಲಿ ಸಿಲುಕಿಕೊಂಡಿದ್ದ 24 ಮಂದಿ ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಮತ್ತು ಇತರರು ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಹವಾಮಾನ ವೈಪರೀತ್ಯ ಕಾರಣ 14 ದೋಣಿಗಳಲ್ಲಿ ಕನಿಷ್ಠ 55 ಮೀನುಗಾರರು ಕೇರಳ ಕರಾವಳಿಗೆ ಸಮೀಪದಲ್ಲಿದ್ದರು ಎಂದು ಐಸಿಜಿ ಪ್ರಕಟಣೆಯಲ್ಲಿ ತಿಳಿಸಿದೆ.
"ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಹೊರತಾಗಿಯೂ ಐಸಿಜಿ ಹಡಗುಗಳು ಮತ್ತು ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಿ, ಕೋಸ್ಟ್ ಗಾರ್ಡ್, ಸಹ ಮೀನುಗಾರರು, ಸಾಗರ ಜಾರಿ ವಿಭಾಗ ಮತ್ತು ಕರಾವಳಿ ಭದ್ರತಾ ಪೊಲೀಸರು 24 ಮೀನಿಗಾರರನ್ನು ರಕ್ಷಿಸಿದ್ದಾರೆ. ಇನ್ನುಳಿದ 31 ಮೀನುಗಾರರ ಹುಡುಕಾಟ ಪ್ರಗತಿಯಲ್ಲಿದೆ" ಎಂದು ಐಸಿಜಿ ಹೇಳಿದೆ.
ಮೀನುಗಾರಿಕೆ ದೋಣಿಗಳು ಮಲಪ್ಪುರಂ, ಎರ್ನಾಕುಲಂ ಮತ್ತು ಅಲ್ಲಪುಳ ಜಿಲ್ಲೆಗಳ ಪೊನ್ನಾನಿ, ಕಾಯಂಕುಲಂ, ಮುನಂಬಂ ಮತ್ತು ಅಜಿಕೋಡ್ ಬಂದರಿನಿಂದ ಬಂದವು ಎಂದು ಐಸಿಜಿ ತಿಳಿಸಿದೆ.