ಕರ್ನಾಟಕ

karnataka

ETV Bharat / bharat

5 ವರ್ಷದಲ್ಲಿ ದೇಶದ್ರೋಹ ಆರೋಪದಡಿ 233 ಮಂದಿ ವಿರುದ್ಧ ಪ್ರಕರಣ..

ಅಸ್ಸೋಂ ಮತ್ತು ಜಾರ್ಖಂಡ್‌ ಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿರುವ ರಾಜ್ಯಗಳಾಗಿವೆ.

233 people slapped with sedition charge in 2014-18: govt
5ವರ್ಷದಲ್ಲಿ ದೇಶದ್ರೋಹ ಆರೋಪದಡಿ 233 ಮಂದಿ ವಿರುದ್ಧ ಪ್ರಕರಣ ದಾಖಲು

By

Published : Feb 5, 2020, 5:50 PM IST

ನವದೆಹಲಿ: ಕಳೆದ 2014 ರಿಂದ 18ರ ನಡುವೆ ದೇಶದ್ರೋಹ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪದಡಿಯಲ್ಲಿ 233 ಮಂದಿ ವಿರುದ್ಧ ಪ್ರಕರಣಗಳು ದಾಖಲಾಗಿವೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್ ರೆಡ್ಡಿ ಈ ಕುರಿತು ರಾಜ್ಯಸಭೆಗೆ ಮಾಹಿತಿ ನೀಡಿದರು. ಅದರಲ್ಲಿ ಅಸ್ಸೋಂ ಮತ್ತು ಜಾರ್ಖಂಡ್​ನಲ್ಲಿ ತಲಾ 37 ಪ್ರಕರಣಗಳು ನಡೆದಿವೆ. ಇವು ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಪ್ರಕಾರ ಐಪಿಸಿ ಸೆಕ್ಷನ್ 124A ಅಡಿಯಲ್ಲಿ (ದೇಶದ್ರೋಹ) ಈ ಪ್ರಕರಣಗಳು ದಾಖಲಾಗಿವೆ.

ವರ್ಷ ಪ್ರಕರಣಗಳು
2014 47
2015 30
2016 35
2017 51
2018 70

ಲಿಖಿತ ಪ್ರಶ್ನಾವಳಿ ಸಂದರ್ಭದಲ್ಲಿ 2014 ಮತ್ತು 2018ರ ನಡುವೆ ಅಸ್ಸೋಂ ಮತ್ತು ಜಾರ್ಖಂಡ್‌ನಲ್ಲಿ ತಲಾ 37 ಜನರಿಗೆ, ಹರಿಯಾಣದಲ್ಲಿ 29 ಮಂದಿಗೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಇವು ಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

ABOUT THE AUTHOR

...view details