ಲಂಡನ್:23 ವರ್ಷದ ಮಾಡೆಲ್ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುವವರೆಗೂ ಆಕೆಗೆ ತಾನು ಗರ್ಭಿಣಿ ಎನ್ನುವುದೇ ಗೊತ್ತಿರಲಿಲ್ಲವಂತೆ! ಸ್ನಾನದ ಕೋಣೆಯಲ್ಲಿ ಮಗುವಿಗೆ ಜನ್ಮ ನೀಡುವ 10 ನಿಮಿಷಗಳ ಮೊದಲು ಈ ಬಗ್ಗೆ ಮನದಟ್ಟಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಲಂಡನ್ ಮೂಲದ ಮೂಲದ ಮಾಡೆಲ್ ಎರಿನ್ ಲ್ಯಾಂಗ್ಮೇಡ್ ಬಾತ್ರೂಂನಲ್ಲಿ ಮಗುವಿಗೆ ಜನ್ಮ ನೀಡಿರುವ ಮಹಿಳೆ. ದೇಹದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡು ಬಂದಿಲ್ಲವಾದ್ರಿಂದ ತಾನು ಗರ್ಭ ಧರಿಸಿರುವ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೊಟ್ಟೆ ಉಬ್ಬಲಿಲ್ಲ, ಆರೋಗ್ಯದಲ್ಲಿಯೂ ಯಾವ ರೀತಿಯಲ್ಲೂ ಏರುಪೇರಾಗಲಿಲ್ಲ ಎಂದು ಆಕೆ ಹೇಳಿದ್ದಾಳೆ.