ಚಂಡೀಗಢ(ಪಂಜಾಬ್):ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಪಂಜಾಬ್ನಲ್ಲೂ ಇದರ ಹಾವಳಿ ಜೋರಾಗಿದ್ದು , ಇದೇ ಕಾರಣಕ್ಕಾಗಿ ರಾತ್ರಿ ವೇಳೆ ಕರ್ಫ್ಯೂ ವಿಧಿಸಲಾಗಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಂಜಾಬ್ನ 117 ಶಾಸಕರಲ್ಲಿ ಇಲ್ಲಿಯವರೆಗೆ 23 ಎಂಎಲ್ಎಗಳಿಗೆ ಕೊರೊನಾ ಸೋಂಕು ತಗುಲಿರುವುದು ಕನ್ಫರ್ಮ್ ಆಗಿದೆ. ಆಗಸ್ಟ್ 28ರಂದು ಕೇವಲ ಒಂದು ದಿನದ ಅಧಿವೇಶನ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದರ ಮಧ್ಯೆ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಈ ಮಾಹಿತಿ ನೀಡಿದ್ದಾರೆ.
ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ತೃಪ್ತಿ ರಾಜೇಂದ್ರ ಬಿಜ್ವಾ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಇದಾದ ಬಳಿಕ ಸಚಿವರಾದ ಸುಖಜಿಂದರ್ ಸಿಂಗ್, ಗುರುಪಿತ್ ಕಾಂಗ್ರಾ, ಶ್ಯಾಮ ಸುಂದರ್ ಅರೊರ್ಗೂ ಸೋಂಕು ತಗುಲಿತ್ತು. ತದನಂತರ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಅಜಬೈ ಸಿಂಗ್ ಭಾಟಿ ಅವರಿಗೂ ಸೋಂಕು ಕಾಣಿಸಿಕೊಂಡಿದೆ.
ಯಾರಿಗೆಲ್ಲ ಸೋಂಕು?
ಕಾಂಗ್ರೆಸ್ ಶಾಸಕರಾದ ಪ್ರಗತ್ ಸಿಂಗ್, ಮದನ್ ಲಾಲ್ ಜಲಾಲಪುರ್, ಹರ್ದಯಾಲ್, ಆಮ್ ಆದ್ಮಿ ಪಕ್ಷದ ಮಂಜೀತ್ ಸಿಂಗ್, ಕುಲ್ವತ್ ಸಿಂತ್ ಹಾಗೂ ನಜೀರ್ ಸಿಂಗ್ ಅಕಾಲಿ ದಳದ ಮನಪ್ರೀತ್ ಸಿಂಗ್,ಕನ್ವರ್ಜಿತ್ ಸಿಂಗ್, ಲಕ್ಬೀರ್ ಸಿಂಗ್, ಹರೀಂದರ್ ಪಾಲ್ ಹಾಗೂ ಗುರುಪ್ರತಾಪ್ ಸಿಂಗ್ ಅವರಲ್ಲೂ ಕೊರೊನಾ ಕಾಣಿಸಿಕೊಂಡಿದೆ.