ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: 24 ಕಾರ್ಮಿಕರ ದುರ್ಮರಣ - road accident in UP

road accident in UP
ರಸ್ತೆ ಅಪಘಾತ

By

Published : May 16, 2020, 7:15 AM IST

Updated : May 16, 2020, 8:43 PM IST

08:06 May 16

15 ಮಂದಿ ಗಂಭೀರ

ಒಟ್ಟು 22 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 15 ಮಂದಿಯನ್ನು ಸೈಫಾಯ್ ಪಿಜಿಐ ಆಸ್ಪತ್ರೆಯಲ್ಲಿ ದಾಖಲಿಸಲು ಸೂಚಿಸಲಾಗಿದೆ ಎಂದು ಔರಾಯದ ಮುಖ್ಯ ವೈದ್ಯಾಧಿಕಾರಿ ಅರ್ಚನಾ ಶ್ರೀವಾತ್ಸವ ತಿಳಿಸಿದ್ದಾರೆ.   

07:09 May 16

ರಸ್ತೆ ಅಪಘಾತದಲ್ಲಿ 24 ಕಾರ್ಮಿಕರು ಸಾವು

ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ

ಉತ್ತರ ಪ್ರದೇಶ: ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್​​ಗೆ ಬೇರೊಂದು ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ 24 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಔರಾಯ ಜಿಲ್ಲೆಯಲ್ಲಿ ನಡೆದಿದೆ.

ಇಂದು ಮುಂಜಾನೆ 3.30ರ ವೇಳೆ ಘಟನೆ ನಡೆದಿದ್ದು, 15 ರಿಂದ 20 ಮಂದಿಗೆ ಗಾಯಗಳಾಗಿವೆ. ಇವರೆಲ್ಲರೂ ರಾಜಸ್ಥಾನದಿಂದ ಬರುತ್ತಿದ್ದು, ಅನೇಕರು ಬಿಹಾರ್​, ಜಾರ್ಖಂಡ್​ ಹಾಗೂ ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಔರಾಯ ಜಿಲ್ಲಾ ಮ್ಯಾಜಿಸ್ಟ್ರೇಟ್​ ಅಭಿಶೇಕ್​ ಸಿಂಗ್​ ಮಾಹಿತಿ ನೀಡಿದ್ದಾರೆ.  

ಒಟ್ಟು 22 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 15 ಮಂದಿಯನ್ನು ಸೈಫಾಯ್ ಪಿಜಿಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಔರಾಯದ ಮುಖ್ಯ ವೈದ್ಯಾಧಿಕಾರಿ ಅರ್ಚನಾ ಶ್ರೀವಾತ್ಸವ ತಿಳಿಸಿದ್ದಾರೆ.

Last Updated : May 16, 2020, 8:43 PM IST

ABOUT THE AUTHOR

...view details