ಮುಂಬೈ:ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 169 ಮಂದಿ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 22,629 ಪೊಲೀಸರಿಗೆ ವೈರಸ್ ಅಂಟಿದಂತಾಗಿದ್ದು, 24 ಅಧಿಕಾರಿಗಳು ಸೇರಿ ಇಲಾಖೆಯ 241 ಮಂದಿ ಬಲಿಯಾಗಿದ್ದಾರೆ.
ಸೋಂಕಿತ ಪೊಲೀಸರ ಪೈಕಿ 19,198 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, 3,190 ಕೇಸ್ಗಳು ಸಕ್ರಿಯವಾಗಿವೆ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾರ್ಚ್ 22 ರಿಂದ ಕೊರೊನಾ ಸಂಬಂಧಿತ ಪೊಲೀಸರ ಕ್ರಮಗಳು ರಾಜ್ಯದಲ್ಲಿ ಲಾಕ್ಡೌನ್ ಹಾಗೂ ಕೊರೊನಾ ನಿಯಮ ಉಲ್ಲಂಘನೆ ಸಂಬಂಧ ಕಳೆದ ಮಾರ್ಚ್ 22 ರಿಂದ ಈವರೆಗೆ ಒಟ್ಟು 2,70,571 ಕೇಸ್ಗಳನ್ನು ದಾಖಲಿಸಿರುವ ಪೊಲೀಸರು, 37,042 ಜನರ ಬಂಧಿಸಿದ್ದು, 96,430 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೇ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದಕ್ಕೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಸಂಬಂಧ 364 ಪ್ರಕರಣಗಳು ದಾಖಲಾಗಿದ್ದು, 895 ಮಂದಿಯನ್ನು ಬಂಧಿಸಲಾಗಿದೆ. ಕೊರೊನಾ ಸಂಬಂಧ ಈವರೆಗೆ ರಾಜ್ಯದ ಪೊಲೀಸ್ ಠಾಣೆಗಳಿಗೆ 1,13,293 ಫೋನ್ ಕರೆಗಳು ಬಂದಿವೆ.