ಕರ್ನಾಟಕ

karnataka

ETV Bharat / bharat

ತೆಲಂಗಾಣದಲ್ಲಿ 2,256 ಹೊಸ ಕೋವಿಡ್​ ಪ್ರಕರಣ; 14 ಸಾವು! - Telangana covid news

ತೆಲಂಗಾಣದಲ್ಲಿ ಹೊಸದಾಗಿ 2,256 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ರಾಜ್ಯದ ಕೋವಿಡ್ ಪ್ರಕರಣಗಳ ಸಂಖ್ಯೆ 77,513ಕ್ಕೆ ಏರಿಕೆಯಾಗಿದೆ.

corona
ಕೋವಿಡ್

By

Published : Aug 8, 2020, 11:35 AM IST

ಹೈದರಾಬಾದ್​: ತೆಲಂಗಾಣದಲ್ಲಿ ಶನಿವಾರ ಹೊಸದಾಗಿ 2,256 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 14 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 77,513 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 615 ಜನ ಸಾವನ್ನಪ್ಪಿದ್ದಾರೆ.

ರಾಜಧಾನಿ ಹೈದರಾಬಾದ್ ತೆಲಂಗಾಣದಲ್ಲಿ ಹೆಚ್ಚು ಕೋವಿಡ್​ ಪೀಡಿತ ಜಿಲ್ಲೆಯಾಗಿದೆ. ಶನಿವಾರ ವರದಿಯಾದ ಒಟ್ಟು ಪ್ರಕರಣಗಳಲ್ಲಿ 464 ಪ್ರಕರಣಗಳು ಮುತ್ತಿನ ನಗರಿಯಲ್ಲೇ ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 1,091 ಜನರು ಡಿಸ್ಚಾರ್ಜ್ ಆಗಿದ್ದು, ಈವರೆಗೆ 54,330 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕಳೆದ ದಿನ 23,322 ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಈವರೆಗೆ 5,90, 306 ಥ್ರೋಟ್​ ಸ್ವ್ಯಾಬ್​ ಟೆಸ್ಟ್​​​ ಮಾಡಲಾಗಿದೆ.

ABOUT THE AUTHOR

...view details