ಕರ್ನಾಟಕ

karnataka

ETV Bharat / bharat

ಟಿಕ್​ಟಾಕ್​ ದುರಂತ: ವಿಡಿಯೋ ಮಾಡಲು ಹೋಗಿ ನೀರಲ್ಲಿ ಬಿದ್ದು ಯುವಕ ಸಾವು - ಹೈದರಾಬಾದ್

TikTok ವಿಡಿಯೋ ಮಾಡುವ ಉದ್ದೇಶದಿಂದ ನದಿಯಲ್ಲಿ ಇಳಿದು ಡ್ಯಾನ್ಸ್​ ಮಾಡುವ ಸೆಲ್ಫಿ ದೃಶ್ಯ ಸೆರೆ ಹಿಡಿಯಲು ಹೋಗಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಟಿಕ್​ಟಾಕ್​ಗೆ ಮತ್ತೊಂದು ಬಲಿ

By

Published : Jul 11, 2019, 10:58 PM IST

ಹೈದರಾಬಾದ್​​:ಕಳೆದ ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ಯುವಕನೋರ್ವ ಟಿಕ್​​ಟಾಕ್​ಗಾಗಿ ವಿಡಿಯೋ ಸ್ಟಂಟ್ ಮಾಡಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು ಎಲ್ಲರಿಗೂ ಗೊತ್ತಿದೆ. ಈ ಮಧ್ಯೆ ಅಂತಹ ಮತ್ತೊಂದು ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಯುವಕರಿಬ್ಬರು ನದಿಯಲ್ಲಿ ಇಳಿದು ಡ್ಯಾನ್ಸ್​ ಮಾಡುವ ವಿಡಿಯೋ ಸೆರೆ ಹಿಡಿಯಲು ಮುಂದಾಗಿದ್ದರು. ನಂತರ ಅದನ್ನು ಟಿಕ್​ಟಾಕ್​ ಆ್ಯಪ್​​ನಲ್ಲಿ ಅಪ್‌ಲೋಡ್​ ಮಾಡಲು ನಿರ್ಧರಿಸಿದ್ದರು ಎಂದು ತಿಳಿದು ಬಂದಿದೆ.
ಘಟನೆಯ ಪೂರ್ಣ ವಿವರ
ಯುವಕರಿಬ್ಬರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸೆಲ್ಫಿ ವಿಡಿಯೋ ಸೆರೆ ಹಿಡಿದುಕೊಳ್ಳುತ್ತಿದ್ದರು. ಈ ವೇಳೆ ಪ್ರಶಾಂತ್ ಎಂಬ ಯುವಕ ನದಿಯ ಆಳಕ್ಕೆ ಇಳಿದು ಸೆಲ್ಫಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಆದರೆ ಕಾಲುಜಾರಿ ನದಿಯಲ್ಲಿ ಬಿದ್ದಿದ್ದು, ಮೇಲೆ ಎದ್ದು ಬರಲು ಸಾಧ್ಯವಾಗದೇ ಮೃತಪಟ್ಟಿದ್ದಾನೆ. ನರಸಿಂಹ ಎಂಬ ಮತ್ತೊಬ್ಬ ಯುವಕ ದಡ ಸೇರಿಕೊಂಡಿದ್ದು, ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಬಂದರೂ ಆತನ ರಕ್ಷಣೆ ಮಾಡುವಲ್ಲಿ ವಿಫಲರಾದ್ರು.

ತಕ್ಷಣ ಘಟನಾ ಸ್ಥಳಕ್ಕೆ ಬಂದಿದ್ದು ಯುವಕನ ಮೃತದೇಹ ಹೊರತೆಗೆದಿದ್ದಾರೆ. ಜೊತೆಗೆ ಮೊಬೈಲ್​ ಕೂಡ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details