ನವಹೆಹಲಿ:ಖರ್ಚಿಗೆಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ 22 ವರ್ಷದ ಯುವಕ ಬರ್ಬರವಾಗಿ ಹತ್ಯೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಅಶುತೋಶ್ ತಾಯಿಯನ್ನು ಹತ್ಯೆಗೈದ ಆರೋಪಿ.
ನವಹೆಹಲಿ:ಖರ್ಚಿಗೆಹಣ ನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ 22 ವರ್ಷದ ಯುವಕ ಬರ್ಬರವಾಗಿ ಹತ್ಯೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಅಶುತೋಶ್ ತಾಯಿಯನ್ನು ಹತ್ಯೆಗೈದ ಆರೋಪಿ.
ಈತ ಡ್ರಗ್ಸ್ ವ್ಯಸನಿಯಾಗಿದ್ದು ಸೆಪ್ಟೆಂಬರ್ 17ರಂದು ಬೆಳಗ್ಗೆ ತಾಯಿ ಪೂಜೆ ಮಾಡುತ್ತಿರುವ ವೇಳೆ ಹಣ ನೀಡುವಂತೆ ಪೀಡಿಸಿದ್ದಾನೆ. ಮಗನ ಒತ್ತಾಯಕ್ಕೆ ಪ್ರತಿಕ್ರಿಯಿಸದ ತಾಯಿ ಶಿಕ್ಷಾದೇವಿ ಆಕೆಯ ಪಾಡಿಗೆ ಪೂಜಾಕಾರ್ಯ ಮುಂದುವರೆಸಿದ್ದಳು.ಈ ವೇಳೆ ಸಿಟ್ಟಿಗೆದ್ದ ಅಶುತೋಶ್ ಕಬ್ಬಿಣದ ರಾಡ್ನಿಂದ ಆಕೆಯ ತಲೆಗೆ ಜೋರಾಗಿ ಹೊಡೆದಿದ್ದಾನೆ. ನಂತರ ಸ್ಥಳದಿಂದ ಆತ ಕಾಲ್ಕಿತ್ತಿದ್ದ.
ಶಿಕ್ಷಾದೇವಿಯನ್ನು ಆಕೆಯ ಇನ್ನೋರ್ವ ಮಗ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಆಸ್ಪತ್ರೆ ಸಿಬ್ಬಂದಿ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ತಲೆಯಲ್ಲಿ ವಿಪರೀತ ರಕ್ತಸ್ರಾವವಾದ ಕಾರಣ ಶಿಕ್ಷಾದೇವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ದೂರಿನ ಮೇರೆಗೆ ಈ ಪ್ರಕರಣ ಬೆನ್ನು ಹತ್ತಿದ ಪೊಲೀಸರು ಮಗನ ಕೈವಾಡದ ಬಗ್ಗೆ ಶಂಕಿಸಿ ಆತನನ್ನು ಹಿಡಿದು ತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.