ಕರ್ನಾಟಕ

karnataka

ETV Bharat / bharat

ಶುಕ್ರವಾರದ ರಾಶಿಫಲ...ನಿಮ್ಮ ವೃತ್ತಿಜೀವನ ಇಂದು ಹೇಗಿದೆ..? - 22 ಮೇ 2020 ರಾಶಿಫಲ

ಶುಕ್ರವಾರದ ರಾಶಿಫಲ

22 May 2020 ETV Astrology
ಶುಕ್ರವಾರದ ರಾಶಿಫಲ

By

Published : May 22, 2020, 5:01 AM IST

ಮೇಷ

ಬಹಳ ಎಚ್ಚರದಿಂದಿರಿ, ನೀವು ಇಂದು ಹಲವು ಹೃದಯಗಳನ್ನು ಒಡೆಯಲಿದ್ದೀರಿ, ಉಳಿದಂತೆ ನಿಮ್ಮ ಪ್ರೀತಿಯ ಜೀವನ ಸ್ಥಿರವಾಗಿರುತ್ತದೆ ಮತ್ತು ನೀವು ನಿಮ್ಮ ಪ್ರೀತಿಪಾತ್ರರಿಗೆ ಬದ್ಧರಾಗಲು ಸಿದ್ಧವಾದಂತೆ ಭಾವಿಸುತ್ತೀರಿ. ವಿವಾಹಿತರಾದರೆ, ನಿಮ್ಮ ಬಾಂಧವ್ಯ ಆಳವಾದ ರಂಗು ಪಡೆಯುತ್ತದೆ ಮತ್ತು ಸದೃಢ ಬಾಂಧವ್ಯದ ಲಗತ್ತು ಹೊಂದಿರುತ್ತದೆ.

ವೃಷಭ

ನೀವು ಹಾಕಿದ ಕಠಿಣ ಪರಿಶ್ರಮದ ನಂತರವೂ ಪ್ರತಿಫಲ ತಕ್ಕಷ್ಟಿಲ್ಲ ಎಂದು ನೀವು ಕಾಣುತ್ತೀರಿ. ಮಧ್ಯಾಹ್ನದಂದು ನೀವು ಪ್ರಯಾಣ ಮಾಡಲು ಉತ್ಸಾಹದಲ್ಲಿರುವುದಿಲ್ಲ, ಆದರೆ ಸಂಜೆ ವೇಳೆ ನಿಮ್ಮ ಪ್ರೀತಿಪಾತ್ರರೊಂದಿಗೆ ಮಾತುಕತೆಯ ಕಾರಣ ಮನಸ್ಸು ನಿರಾಳವಾಗಿರುತ್ತವೆ.

ಮಿಥುನ

ನಿಮ್ಮ ಸುತ್ತಲಿನ ಜನರು ಸಂತೋಷದಲ್ಲಿದ್ದು ಅವರ ಸಮಯವನ್ನು ಆನಂದಿಸುತ್ತಿರುವಾಗ, ನೀವು ವ್ಯಾಪಾರ ವ್ಯವಹಾರಗಳಲ್ಲಿ ಮುಳುಗಿ ಹೋಗಿರುತ್ತೀರಿ. ನೀವು ವ್ಯಾಪಾರ ಸಂಬಂಧಿತ ಪ್ರವಾಸ ಮಾಡುವ ಸಾಧ್ಯತೆಯೂ ಇದೆ. ಆದರೆ ವೃತ್ತಿಪರ ಯಶಸ್ಸು ನಿಶ್ಚಿತವಾಗಿದೆ, ಅದು ನಿಮಗೆ ಸಂಭ್ರಮಕ್ಕೆ ಕಾರಣವಾಗಲೂಬಹುದು.

ಕರ್ಕಾಟಕ

ಅಪಾರ ಒತ್ತಡ ಮತ್ತು ಇತರರ ಕೆಲಸದ ಭಾರ. ಆದರೂ ನೀವು ಸಾಧಿಸುತ್ತೀರಿ. ವ್ಯಾಪಾರದಲ್ಲಿ, ಪ್ರತಿಸ್ಪರ್ಧಿಗಳು ಮತ್ತು ವಿರೋಧಿಗಳು ಅವರ ಯುಕ್ತಿಗಳಲ್ಲಿ ವಿಫಲರಾಗುತ್ತಾರೆ. ಈ ಹಂತದ ಸಂಪೂರ್ಣ ಬಳಕೆ ಮಾಡಿಕೊಳ್ಳಿರಿ.

ಸಿಂಹ

ಇಂದು ನೀವು ಅತಿಯಾದ ಭಾವನಾತ್ಮಕತೆಯಿಂದ ದೂರ ಉಳಿಯಬೇಕು. ಜೀವನದತ್ತ ನಿಮ್ಮ ಪ್ರವೃತ್ತಿಯನ್ನು ಬದಲಾಯಿಸುವ ನಿಮ್ಮ ಬಯಕೆಗೆ ಅನುಸಾರ ನೀವು ನಿಮ್ಮ ಜೀವನದ ಎಲ್ಲಾ ವೃತ್ತಗಳಲ್ಲೂ ಶ್ರೇಷ್ಠರಾಗಲು ಸಮರ್ಥರಾಗುತ್ತೀರಿ. ಇಂದು ನಿಮ್ಮ ಮನೆಯನ್ನು ಮರು ಅಲಂಕರಣ ಅಥವಾ ನವೀಕರಣ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಪ್ರಗತಿಪರ ದಿನ ಕಾಯುತ್ತಿದೆ.

ಕನ್ಯಾ

ಇಂದು ನಿಮ್ಮ ಖರ್ಚುಗಳು ನೀವು ಮಾಡಿರುವ ಉಳಿತಾಯ ಮೀರುತ್ತವೆ. ನಿಮ್ಮ ವೈವಾಹಿಕ ಬಾಂಧವ್ಯ ಅರಳುವುದನ್ನು ಕಾಣುತ್ತೀರಿ. ಸಂತೋಷಕರ ಜೀವನ ನಡೆಸಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಂಧವನ್ನು ಸದೃಢಗೊಳಿಸಿಕೊಳ್ಳಿ.

ತುಲಾ

ನಿಮ್ಮ ಫ್ಯಾಷನ್ ತಿಳಿವಳಿಕೆ ನಿಮ್ಮನ್ನು ಸದೃಢ ವ್ಯಕ್ತಿಯನ್ನಾಗಿ ಬೆಳೆಯಲು ನೆರವಾಗುತ್ತಿರುವಾಗ, ಜನರು ನಿಮ್ಮತ್ತ ಆಕರ್ಷಿತರಾಗುವುದನ್ನು ಕಾಣುತ್ತೀರಿ. ಸಾಮಾಜಿಕ ಸಭೆಯು ನಿಮಗೆ ಗಮನಾರ್ಹವಾದ ಮತ್ತೊಬ್ಬರನ್ನು ಭೇಟಿಯಾಗಲು ನೆರವಾಗುತ್ತದೆ ಮತ್ತು ಪ್ರಣಯದ ಸಾಧ್ಯತೆ ವಾತಾವರಣದಲ್ಲಿ ತುಂಬಿದೆ.

ವೃಶ್ಚಿಕ

ಯಾವುದೇ ವಿಷಯಕ್ಕೆ ಆತುರಪಡಬೇಡಿ. ಸರಿಯಾದ ತೀರ್ಮಾನಕ್ಕೆ ಸಮಯ ಅಗತ್ಯ, ಆದ್ದರಿಂದ ಯಾವುದೇ ತೀರ್ಮಾನಗಳಿಗೆ ಬರುವ ಮುನ್ನ ಆಲೋಚಿಸಿ, ಏಕೆಂದರೆ ನಿಮ್ಮ ಪ್ರಯತ್ನಗಳು ಯಾವುದೇ ಫಲಿತಾಂಶಗಳನ್ನು ತಂದುಕೊಡದೇ ಇರುವ ಸಾಧ್ಯತೆ ಇದೆ. ಸಂಜೆ ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ ಮತ್ತು ಅವರಿಗೆ ನೀವು ಕಾಳಜಿ ವಹಿಸುತ್ತೀರಿ ಎಂದು ಗೊತ್ತಾಗಲಿ.

ಧನು

ನೀವು ನಿಮ್ಮ ಪ್ರೀತಿ ಪಾತ್ರರ ಆಸಕ್ತಿಗಳನ್ನು ಸಂರಕ್ಷಿಸಲು ಸ್ವಲ್ಪ ಕಷ್ಟ ಪಡಬಹುದು. ಮಧ್ಯಾಹ್ನ ನೀವು ವ್ಯಾಪಾರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾಯ್ದಿರಿಸಿಕೊಳ್ಳುತ್ತೀರಿ. ಅದಾಗಿಯೂ ಸ್ವಲ್ಪ ಹೆಚ್ಚುವರಿ ಖರ್ಚುಗಳು ಎದುರಾಗಬಹುದು, ಏಕೆಂದರೆ ದಿನದಲ್ಲಿ ಆನ್​​​ಲೈನ್​ ಶಾಪಿಂಗ್ ಮಾಡಬಹುದು.

ಮಕರ

ನೀವು ಇಂದು ಸಮತೋಲನದ ಕಾರ್ಯ ನಿರ್ವಹಿಸುತ್ತೀರಿ. ಒಂದೆಡೆ ನೀವು ನಿಮ್ಮ ಗುರಿಗಳನ್ನು ತಲುಪಲು ಬಹಳ ಶ್ರಮ ವಹಿಸುತ್ತೀರಿ, ಮತ್ತೊಂದೆಡೆ, ನಿಮ್ಮ ಹವ್ಯಾಸಗಳಿಗೆ ಕೊಂಚ ಸಮಯ ಮೀಸಲಿಡುತ್ತೀರಿ. ನಿಮ್ಮ ಮೇಲಧಿಕಾರಿ ಮತ್ತು ಸಹೋದ್ಯೋಗಿಗಳು ನಿಮ್ಮ ಮೇಲೆ ಪ್ರಶಂಸೆಗಳ ಸುರಿಮಳೆ ಸುರಿಸುತ್ತಾರೆ. ಆದರೆ ಹೊಳೆಯುವುದೆಲ್ಲಾ ಚಿನ್ನವಲ್ಲ. ಅವರ ಮಾತುಗಳನ್ನು ಹಾಗೆಯೇ ಪರಿಗಣಿಸಬೇಡಿ, ನೀವು ಅದರ ಗೂಢಾರ್ಥ ತಿಳಿಯದೇ ಇರಬಹುದು. ಇದು ವಿದ್ಯಾರ್ಥಿಗಳಿಗೆ ಒಳ್ಳೆಯ ದಿನವಾಗಿದೆ.

ಕುಂಭ

ಇಂದು ನಿಮಗೆ ಪಾರ್ಟಿ ಮಾಡಲು ಅತ್ಯಂತ ಸಣ್ಣ ಕಾರಣಗಳು ಸಾಕು. ಶುಭಸುದ್ದಿ ನಿಮ್ಮ ಉತ್ಸಾಹಕ್ಕೆ ಸೇರ್ಪಡೆಯಾಗುತ್ತದೆ. ಈ ದಿನ ಧನಾತ್ಮಕವಾಗಿ ಪ್ರಾರಂಭವಾಗುತ್ತದೆ, ಮತ್ತು ಇದು ಇಡೀ ದಿನ ಮುಂದುವರೆಯುತ್ತದೆ. ನೀವು ಜೀವನಕ್ಕಾಗಿ ಹೊಸ ಜನರನ್ನು ಭೇಟಿಯಾಗುತ್ತೀರಿ ಮತ್ತು ಮಿತ್ರರನ್ನು ಮಾಡಿಕೊಳ್ಳುತ್ತೀರಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯಿರಿ ಮತ್ತು ಪರಿಪೂರ್ಣ ದಿನವನ್ನು ಪರಿಪೂರ್ಣವಾಗಿ ಮುಗಿಸಿರಿ.

ಮೀನ

ಇಂದು ಪಾಲುದಾರಿಕೆಗಳನ್ನು ನಿರ್ಮಿಸಲು ಮತ್ತು ಹಳೆಯವನ್ನು ನವೀಕರಿಸಲು ಅತ್ಯಂತ ಸುಂದರ ದಿನವಾಗಿ ಕಾಣುತ್ತಿದೆ. ನೀವು ಇನ್ನೂ ಬದ್ಧರಾಗಿಲ್ಲದೇ ಇದ್ದಲ್ಲಿ, ಇಂದು ನಿಮ್ಮ ಮಹತ್ವದ ಸಂಗಾತಿ ಕಂಡುಕೊಳ್ಳುವ ದಿನವಾಗಿದೆ. ಬಾಂಧವ್ಯಗಳಲ್ಲಿ ಇರುವವರಿಗೆ, ಪ್ರಣಯ ತುಂಬಿರುವ ದಿನವಾಗಿದೆ. ಕೆಲಸದ ವಿಷಯದಲ್ಲಿಯೂ, ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಒಳ್ಳೆಯ ವ್ಯಾಪಾರ ಪಾಲುದಾರರನ್ನು ಪಡೆಯುವ ಸಾಧ್ಯತೆ ಇದೆ.

ABOUT THE AUTHOR

...view details