ಕರ್ನಾಟಕ

karnataka

ETV Bharat / bharat

ಮಾನವ-ಪ್ರಾಣಿ ಸಂಘರ್ಷಕ್ಕೆ ಈ ರಾಜ್ಯದಲ್ಲಿ ಒಂದೇ ವರ್ಷ 22 ಜನ ಬಲಿ! - ಉತ್ತರಾಖಂಡ್ ಸುದ್ದಿ

ಉತ್ತರಾಖಾಂಡ್​ ಗುಡ್ಡಗಾಡು ರಾಜ್ಯ ಮಾತ್ರವಲ್ಲದೆ, ಈ ರಾಜ್ಯ ಕಾಡು ಪ್ರದೇಶಗಳಿಂದ ತುಂಬಿದೆ. ರಾಜ್ಯದ ಶೇ.70ರಷ್ಟು ಭೂಪ್ರದೇಶ ಕಾಡುಗಳಿಂದ ಆವೃತವಾಗಿದೆ. ಹೀಗಾಗಿ, ಈ ಭಾಗದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿವೆ..

man-animal conflict
ನರ-ಪ್ರಾಣಿ ಸಂಘರ್ಷ

By

Published : Sep 14, 2020, 5:51 PM IST

ಡೆಹ್ರಾಡೂನ್​(ಉತ್ತರಾಖಂಡ್​) :ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಈ ವರ್ಷ ಉತ್ತಾರಾಖಂಡ್​ ರಾಜ್ಯದಲ್ಲಿ 22 ಜನ ಬಲಿಯಾಗಿದ್ದಾರೆ. ವರ್ಷದಲ್ಲಿ ಇನ್ನೂ ಮೂರು ತಿಂಗಳು ಬಾಕಿ ಇರುವಂತೆಯೇ, ಈವರೆಗೆ ದಾಖಲಾದ ಅಂಕಿ-ಅಂಶ ರಾಜ್ಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೊಸ ಸವಾಲನ್ನು ತಂದಿಟ್ಟಿದೆ.

ಈಗಾಗಲೇ ಉತ್ತಾರಾಖಂಡ್​ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ, ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಘರ್ಷಣೆ ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ, ಸಮರ್ಥ ಕ್ರಮಗಳನ್ನು ಕೆಳ ಮಟ್ಟದಿಂದಲೇ ಕೈಗೊಂಡಿರುವಲ್ಲಿ ಕೆಲ ಲೋಪಗಳು ಕಂಡು ಬಂದಿರುವ ಪರಿಣಾಮವಾಗಿ, ಈವರೆಗೆ 22 ಮಂದಿ ಕ್ರೂರ ಪ್ರಾಣಿಗಳ ಬಾಯಿಗೆ ತುತ್ತಾಗಿದ್ದಾರೆ.

ಕಳೆದ ವರ್ಷ ಇದೇ ಕಾರಣದಿಂದಾಗಿ ರಾಜ್ಯದಲ್ಲಿ 68 ಜನ ಸಾವನ್ನಪ್ಪಿದ್ದರು. ಈ ಬಾರಿ ಕೋವಿಡ್​ ಮಹಾಮಾರಿಯಿಂದಾಗಿ ಕಳೆದ ಜುಲೈ ತಿಂಗಳವರೆಗೂ ಪ್ರಾಣಿಗಳು ಹಾಗೂ ಮಾನವ ಸಂಘರ್ಷದ ಪ್ರಕರಣ ರಾಜ್ಯದಲ್ಲಿ ಕಡಿಮೆಯಾಗಿತ್ತು. ಆದರೆ, ಒಟ್ಟಾರೆ ಇನ್ನೂ ಮೂರು ತಿಂಗಳು ಬಾಕಿ ಇರುವಂತೆಯೇ 22 ಜನ ಸಾವನ್ನಪ್ಪಿದ್ದಾರೆ. ಪ್ರತಿ ವರ್ಷವೂ ಈ ಅಂಕಿ-ಸಂಖ್ಯೆಗಳು ಜಾಸ್ತಿಯಾಗುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಹೀಗಿದೆ ಕಳೆದ 9 ವರ್ಷಗಳ ಅಂಕಿ-ಅಂಶ

ಉತ್ತರಾಖಾಂಡ್​ ಗುಡ್ಡಗಾಡು ರಾಜ್ಯ ಮಾತ್ರವಲ್ಲದೆ, ಈ ರಾಜ್ಯ ಕಾಡು ಪ್ರದೇಶಗಳಿಂದ ತುಂಬಿದೆ. ರಾಜ್ಯದ ಶೇ.70ರಷ್ಟು ಭೂಪ್ರದೇಶ ಕಾಡುಗಳಿಂದ ಆವೃತವಾಗಿದೆ. ಹೀಗಾಗಿ, ಈ ಭಾಗದಲ್ಲಿ ಕಾಡುಪ್ರಾಣಿಗಳು ಹೆಚ್ಚಾಗಿವೆ. ಇನ್ನೊಂದೆಡೆ ಈ ಪ್ರಾಣಿಗಳು ಕೆಲ ಸಂದರ್ಭದಲ್ಲಿ ಆಹಾರ ಅರಸುತ್ತಾ ಮಾನವ ವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು, ಇದು ಮಾನವ ಹಾಗೂ ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದೆ.

ಇದೇ ವಿಚಾರವಾಗಿ ಎಚ್ಚೆತ್ತ ಅರಣ್ಯ ಇಲಾಖೆ, ಗ್ರಾಮೀಣ ಭಾಗದ ಜನರಿಗೆ ಕೆಲ ಸಲಹೆಗಳನ್ನು ನೀಡಿದೆ. ಮನೆ ಹಾಗೂ ಜನವಾಸದ ಪ್ರದೇಶಗಳಲ್ಲಿ ಹೆಚ್ಚು ಪೊದೆಗಳು ಬೆಳೆಯದಂತೆ ನೋಡಿಕೊಳ್ಳಬೇಕು. ತೆರೆದ ಪ್ರದೇಶಗಳಿಗೆ ಬಹಿರ್ದೆಸೆಗೆ ಹೋಗದೆ ಮನೆಯ ಶೌಚಾಲಯಗಳನ್ನು ಬಳಸಬೇಕು. ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಾಗ ಆದಷ್ಟು ಗುಂಪು-ಗುಂಪಾಗಿ ಕಳಿಸಬೇಕು. ರಾತ್ರಿ ವೇಳೆ ಮನೆಯ ಲೈಟ್​ಗಳನ್ನು ಆನ್​ ಮಾಡಿರಿ ಎಂದು ಜನರಿಗೆ ಅಧಿಕಾರಿಗಳು ಸಲಹೆ-ಸೂಚನೆಗಳನ್ನು ಕೊಟ್ಟಿದ್ದಾರೆ.

ABOUT THE AUTHOR

...view details