ರೊಹತಸ್(ಬಿಹಾರ್):ರೊಹತಸ್ ಜಿಲ್ಲೆಯಪ್ರೌಢ ಶಾಲೆಗಳಲ್ಲಿ 214 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸದ್ಯ ನಕಲಿ ಪದವಿ ಹೊಂದಿದ 30 ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ. ಈ ಘಟನೆ ಶಿಕ್ಷಣದ ಗುಣಮಟ್ಟದ ಕುರಿತು ಪ್ರಶ್ನೆಗೆ ಕಾರಣವಾಗಿದೆ.
ರಾಜ್ಯದಲ್ಲಿ 17 ಶಾಸಕರು ಅನರ್ಹ.... ಅಲ್ಲಿ 30 ಶಿಕ್ಷಕರಿಗೆ ಗೇಟ್ಪಾಸ್..... - ಅಲ್ಲಿ 214 ಫೇಕ್ ಶಿಕ್ಷಕರಿಗೆ ಗೇಟ್ಪಾಸ್.....
ಬಿಹಾರ್ನ ರೊಹತಸ್ ಜಿಲ್ಲೆಯ ಪ್ರೌಢ ಶಾಲೆಗಳ 214 ಶಿಕ್ಷಕರು ಕೆಲಸ ಮಾಡುತ್ತಿದ್ದು, ಸದ್ಯ 30 ನಕಲಿ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ನಕಲಿ ಪದವಿ ಪಡೆದ ಶಿಕ್ಷಕರು ಇನ್ನೂ ಹಲವರಿದ್ದಾರೆ ಎಂದಿರುವ ಜಿಲ್ಲಾ ಶಿಕ್ಷಣಾಧಿಕಾರಿ ಪ್ರೇಮ್‌ಚಂದ್, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
214 'fake' teachers suspended in Rohtas, ರೊಹತಸ್ನ 214 ಫೇಕ್ ಶಿಕ್ಷಕರು ಅನರ್ಹ
ಜಿಲ್ಲಾ ಶಿಕ್ಷಣಾಧಿಕಾರಿ ಪ್ರೇಮ್‌ಚಂದ್ ಜಿಲ್ಲೆಯಲ್ಲಿ ನೇಮಕಗೊಂಡ 30 ನಕಲಿ ಶಿಕ್ಷಕರನ್ನು ತನಿಖೆಗೆ ಒಳಪಡಿಸಿದರು. ಬಳಿಕ 30 ಶಿಕ್ಷಕರು ನಕಲಿ ಪದವಿ ಹೊಂದಿದ್ದು, ಯಾವುದೇ ಅರ್ಹತೆಗಳಿಲ್ಲದೇ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ನಕಲಿ ಶಿಕ್ಷಕರು ಜಾರ್ಖಂಡ್‌ನ ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯದಿಂದ ತಾವೆಲ್ಲ ಪದವಿ ಪಡೆದಿದ್ದೇವೆ ಎಂದು ಈ ಎಲ್ಲ ಶಿಕ್ಷಕರು ಹೇಳಿಕೊಂಡಿದ್ದಾರೆ. ನಕಲಿ ಪದವಿ ಪಡೆದ ಶಿಕ್ಷಕರು ಇನ್ನೂ ಹಲವರಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪ್ರೇಮ್‌ಚಂದ್ ಮಾಹಿತಿ ನೀಡಿದ್ದಾರೆ.