ರಾಮಗಂಜ್ ಮಂಡಿ (ಕೋಟಾ):ಅಕ್ಟೋಬರ್ 3ರಂದು 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದ ಕಾಮುಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕ ಅಂದರ್ - ಅಪ್ರಾಪ್ತೆ ಮೇಲೆ ಅತ್ಯಾಚಾರ
ಅಕ್ಟೋಬರ್ 3ರಂದು ತನ್ನ ಅಜ್ಜಿ ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿಯೋರ್ವಳ ಮೇಲೆ ಪಕ್ಕದ ಮನೆಯ ಇಸ್ಮಾಯಿಲ್ ಎಂಬಾತ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಕಳೆದ ಶನಿವಾರ ಮಧ್ಯಾಹ್ನ ಸಂತ್ರಸ್ತೆಯ ಪೋಷಕರು ಬಾಲಕಿಯನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಬಾಲಕಿ ಹೊರಗೆ ಆಡುತ್ತಿದ್ದ ವೇಳೆ ಅವರ ನೆರೆ ಮನೆಯ ಇಸ್ಮಾಯಿಲ್(21) ಎಂಬಾತ ಆಕೆಯನ್ನು ಅವನ ಮನೆಗೆ ಕರೆದೊಯ್ದಿದ್ದಾನೆ. ಬಾಲಕಿ ಕಿರುಚಲು ಆರಂಭಿಸಿದಾಗ ಹೊರಗೆ ಆಡುತ್ತಿದ್ದ ಇತರೆ ಮಕ್ಕಳು ಆರೋಪಿ ಇಸ್ಮಾಯಿಲ್ ಮನೆಗೆ ತೆರಳಿದ್ದಾರೆ. ಎಚ್ಚೆತ್ತ ಆರೋಪಿ ಆ ಬಾಲಕಿಯನ್ನು ಹೋಗಲು ಬಿಟ್ಟಿದ್ದಾನೆ. ನಂತರ ಬಾಲಕಿ ಕುಟುಂಬಸ್ಥರಿಗೆ ಮಕ್ಕಳು ವಿಷಯ ತಿಳಿಸಿದ್ದು, ಕೂಡಲೇ ಪೋಷಕರು ದೂರು ದಾಖಲಿಸಿದ್ದಾರೆ.
ಮಗ್ಜಮಂಡಿ ಉಪ ಅಧೀಕ್ಷಕ ಮಂಜಿತ್ ಸಿಂಗ್ ಮಾತನಾಡಿ, ಸುಕೆಟ್ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಆರೋಪಿ ಇಸ್ಮಾಯಿಲ್ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.