ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಕನ್ನಡದ ಕುವರಿಯ ಕಮಾಲ್​... ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ 21ರ ಯುವತಿ! - 313 panchayats in Tamil Nadu

ತಮಿಳುನಾಡಿನಲ್ಲಿ ನಡೆದ ಸ್ಥಳೀಯ ಚುನಾವಣೆಯಲ್ಲಿ ಬೆಂಗಳೂರಿನ ಯುವತಿಯೋರ್ವಳು ಕಮಾಲ್​ ಮಾಡಿದ್ದು, ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾಳೆ.

21-year-old BBA student from Bengaluru
ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾದ 21ರ ಯುವತಿ

By

Published : Jan 3, 2020, 9:09 PM IST

Updated : Jan 3, 2020, 11:40 PM IST

ಕೃಷ್ಣಗಿರಿ(ತಮಿಳುನಾಡು): ತಮಿಳುನಾಡಿನಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, 21 ವರ್ಷದ ಬೆಂಗಳೂರು ಮೂಲಕ ಬಿಬಿಎ ವಿದ್ಯಾರ್ಥಿನಿವೋರ್ವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾದ 21ರ ಯುವತಿ

ಬೆಂಗಳೂರಿನ ಕ್ರೈಸ್ಟ್​ ಕಾಲೇಜ್​ನಲ್ಲಿ ಅಂತಿಮ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ಸಂಧ್ಯಾ ರಾಣಿ 218 ಮತಗಳ ಅಂತರದಿಂದ ಗೆಲುವು ದಾಖಲು ಮಾಡಿದ್ದಾರೆ. ಕಾಟಿನಾಯಕ್ಕಂತೋಟ್ಟಿ ಗ್ರಾಮ ಪಂಚಾಯ್ತಿ ಮಹಿಳಾ ಮೀಸಲು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಇವರು 1,170 ಮತ ಪಡೆದುಕೊಂಡರೆ ಪ್ರತಿಸ್ಪರ್ಧಿ 950 ಮತ ಪಡೆದುಕೊಂಡಿದ್ದಾರೆ.

ಈಗಾಗಲೇ ಸಂಧ್ಯಾರಾಣಿ ತಂದೆ ಜಯಸಾರಥಿ ಈ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ ಸೇವೆ ಸಲ್ಲಿಕೆ ಮಾಡಿದ್ದಾರೆ. ಈ ಸಲ ತಮ್ಮ ಮಗಳನ್ನ ಈ ಚುನಾವಣೆಗೆ ನಿಲ್ಲಿಸಿದ್ದರು. ಜತೆಗೆ ತಾವು ಈಗಾಗಲೇ ಅಧ್ಯಕ್ಷರಾಗಿ ಕೆಲಸ ಮಾಡಿರುವ ಕಾರಣ ತಮ್ಮ ಕುಟುಂಬದಿಂದ ಇನ್ನೊಬ್ಬರಿಗೆ ಅವಕಾಶ ನೀಡಲು ನಿರ್ಧರಿಸಿದ್ದರು.

ನಾಮಪತ್ರ ಸಲ್ಲಿಕೆ ಮಾಡುವುದಕ್ಕಿಂತಲು ಮುಂಚಿತವಾಗಿ ಕಾಲೇಜ್​ ಪ್ರಾಂಶುಪಾಲರಿಂದ ಅನುಮತಿ ಪಡೆದುಕೊಳ್ಳಲಾಗಿತ್ತು ಎಂದು ಅವರ ತಾಯಿ ತಿಳಿಸಿದ್ದು, ಮಗಳು ಕೊನೆ ವರ್ಷದ ಬಿಬಿಎ ಮಾಡುತ್ತಿರುವ ಕಾರಣ ಅಧ್ಯಯನಕ್ಕೆ ಯಾವುದೇ ಅಡ್ಡಿಯಾಗಲ್ಲ ಎಂದು ಹೇಳಿದ್ದಾರೆ.

Last Updated : Jan 3, 2020, 11:40 PM IST

ABOUT THE AUTHOR

...view details