ಅಹಮದಾಬಾದ್: ಲಾಕ್‌ಡೌನ್ ನಡುವೆ ಕಾರ್ಯನಿರ್ವಹಿಸುತ್ತಿದ್ದ ಗುಜರಾತ್ನ ಅಹಮದಾಬಾದ್ನ 21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಲಾಕ್‌ಡೌನ್ ಕರ್ತವ್ಯದಲ್ಲಿದ್ದ 21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ - ಗುಜರಾತ್ನಲ್ಲಿ 21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ಗುಜರಾತ್ನ ಅಹಮದಾಬಾದ್ನಲ್ಲಿ ಲಾಕ್‌ಡೌನ್ ಕರ್ತವ್ಯದಲ್ಲಿದ್ದ 21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ತಿಳಿಸಿದ್ದಾರೆ.
21 ಪೊಲೀಸ್ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
ರಾಜ್ಯದಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ದಕ್ಕೆ ಒಟ್ಟು 5,527 ಪ್ರಕರಣಗಳು ದಾಖಲಾಗಿದ್ದು, 12,333 ಜನರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಲಾಕ್ಡೌನ್ಗಾಗಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗೆ ಈಗ ಸೋಂಕು ತಗುಲಿದೆ. ಸೋಂಕಿತ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿದ್ದು ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಆಶಿಶ್ ಭಾಟಿಯಾ ತಿಳಿಸಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಈವರೆಗೆ 1,743 ಕೋವಿಡ್- 19 ಪ್ರಕರಣಗಳು ಪತ್ತೆಯಾಗಿದ್ದರೆ 58 ಮಂದಿ ಸಾವನ್ನಪ್ಪಿದ್ದಾರೆ.
Last Updated : Apr 19, 2020, 8:06 PM IST
TAGGED:
ಗುಜರಾತ್ನ ಅಹಮದಾಬಾದ್