ಕರ್ನಾಟಕ

karnataka

ETV Bharat / bharat

ಏರ್​ಪೋರ್ಟ್​ನಲ್ಲಿ 21 ಕೆಜಿ ಚಿನ್ನ ಪತ್ತೆ... - ಏರ್​ಪೋರ್ಟ್​ನಲ್ಲಿ ಚಿನ್ನ

ಶಂಶಾಬಾದ್ ಏರ್​ಪೋರ್ಟ್​ನಿಂದ ಮುಂಬೈಗೆ ಪಾರ್ಸಲ್ ಆಗುತ್ತಿದ್ದ 21 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.

21 kg of Gold caught in Shamshabad airport
ಏರ್​ಪೋರ್ಟ್​ನಲ್ಲಿ 21 ಕೆಜಿ ಚಿನ್ನ ಪತ್ತೆ

By

Published : Oct 4, 2020, 4:27 AM IST

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಏರ್​ಪೋರ್ಟ್​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 21 ಕೆಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕೋರಿಯರ್ ಮೂಲಕ ಮುಂಬೈಗೆ ಏರ್​ ಕಾರ್ಗೋ ಮೂಲಕ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಚಿನ್ನ ಪತ್ತೆಯಾಗಿದೆ.

ರಾಜೀವ್ ಗಾಂಧಿ ವಿಮಾನ ನಿಲ್ದಾಣ

ಗೋಲ್ಡ್ ಬಿಸ್ಕೆಟ್ಸ್, ಚಿನ್ನಾಭರಣ ಮತ್ತು ವಜ್ರವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಾರ್ಸಲ್​​ನಲ್ಲಿ ಒಂದು ಫೋನ್ ನಂಬರ್ ಮಾತ್ರ ಇದ್ದು, ಇದು ಯಾರದು ಎಂದು ಗೊತ್ತಾಗಿಲ್ಲ.

ಈ ಚಿನ್ನವನ್ನು ಮುಂಬೈಗೆ ಯಾರು ಕಳುಹಿಸುತ್ತಿದ್ದರು ಎಂಬುದನ್ನು ಅಧಿಕಾರಿಗಳು ಪತ್ತೆ ಹಚ್ಚುವ ಕಾರ್ಯ ಮಾಡುತ್ತಿದ್ದಾರೆ.

ABOUT THE AUTHOR

...view details