ನವದೆಹಲಿ:ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನ 2,050 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 21 ಭಾರತೀಯರು ಜೀವ ಕಳೆದುಕೊಂಡಿದ್ದಾರೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.
ಪಾಕ್ನಿಂದ 2,050 ಬಾರಿ ಕದನ ವಿರಾಮ ಉಲ್ಲಂಘನೆ; 21 ಮಂದಿ ಬಲಿ: ವಿದೇಶಾಂಗ ಇಲಾಖೆ - ರವೀಶ್ ಕುಮಾರ್
ಒಂದು ವರ್ಷದಲ್ಲಿ ಪಾಕಿಸ್ತಾನ 2,050 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, 21 ಭಾರತೀಯರು ಬಲಿಯಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಗಡಿಯಾಚೆಯಿಂದ ಒಳ ನುಸುಳುವ ಭಯೋತ್ಪಾದಕರಿಗೆ ಬೆಂಬಲ ನೀಡುವುದು, ಭಾರತೀಯ ನಾಗರಿಕರು ಮತ್ತು ಗಡಿ ಭಾಗದ ನಮ್ಮ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸುವುದು ಸೇರಿದಂತೆ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ತಿಳಿಸಿದ್ರು.
ಕಳೆದೊಂದು ವರ್ಷದಲ್ಲಿ 2,050 ಬಾರಿ ಪಾಕ್ ಸೇನೆ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ್ದು, ಇದರಿಂದ 21 ಭಾರತೀಯರು ಬಲಿಯಾಗಿದ್ದಾರೆ. 2003ರ ಕದನ ವಿರಾಮ ನಿಯಮಗಳನ್ನು ಅನುಸರಿಸಲು ಮತ್ತು ಗಡಿ ನಿಯಂತ್ರಣ ರೇಖೆ, ಅಂತರರಾಷ್ಟ್ರೀಯ ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಪಾಕ್ ತನ್ನ ಸೇನೆಗೆ ಬುದ್ದಿ ಹೇಳಬೇಕೆಂದು ಭಾರತ ಪದೇ ಪದೇ ಹೇಳುತ್ತಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.