ನವದೆಹಲಿ:ರಕ್ಕಸ ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇಂದು ಮಧ್ಯರಾತ್ರಿಯಿಂದ ಮುಂದಿನ 21 ದಿನಗಳ ಕಾಲ ಇಡೀ ದೇಶವನ್ನೇ ಲಾಕ್ಡೌನ್ ಮಾಡಿ ಆದೇಶ ಹೊರಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರವನ್ನ ಕ್ರಿಕೆಟರ್ಸ್ ಹಾಗೂ ಬಾಲಿವುಡ್ ಸ್ಟಾರ್ಸ್ ಬೆಂಬಲಿಸಿದ್ದು, ನಮೋ ನಿರ್ಧಾರಕ್ಕೆ ಜೈಕಾರ ಹಾಕಿದ್ದಾರೆ.
ವಿರಾಟ್ ಕೊಹ್ಲಿ
ಇಂದು ಮಧ್ಯರಾತ್ರಿಯಿಂದ ಮುಂದಿನ 21 ದಿನಗಳ ಕಾಲ ಭಾರತ ಸಂಪೂರ್ಣವಾಗಿ ಲಾಕ್ಡೌನ್ ಆಗಲಿದ್ದು,ಮನೆಯಲ್ಲಿ ಉಳಿದುಕೊಂಡು ಮೋದಿಯವರ ನಿರ್ಧಾರ ಪಾಲಿಸುವಂತೆ ಕೊಹ್ಲಿ ಮನವಿ ಮಾಡಿದ್ದು, ಸಾಮಾಜಿಕ ಸಮತೋಲನ ಕಾಯ್ದುಕೊಳ್ಳುವುದೇ ಇದಕ್ಕೆ ಪರಿಹಾರ ಎಂದಿದ್ದಾರೆ.
ರವಿಶಾಸ್ತ್ರಿ
ಮೋದಿಯವರ ನಿರ್ಧಾರ ಸರಿಯಾಗಿದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ಶಬ್ದ ಹೊರಬರುತ್ತಿಲ್ಲ. ಸದ್ಯದ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಭಾರತ ಮತ್ತಷ್ಟು ಬಲಿಷ್ಠವಾಗಿ ಪುಟಿದೇಳಲಿದೆ. ಈ ಹಿಂದಿನಿಗಿಂತಲೂ ಉತ್ತಮಗೊಳ್ಳಲಿದೆ ಎಂದು ಹೇಳಿ ನಮೋ ಟ್ವೀಟ್ ಬೆಂಬಲಿಸಿದ್ದಾರೆ.
ಕೆವಿನ್ ಪೀಟರ್ಸ್ನ್
ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟರ್ ಕೂಡ ನಮೋ ನಿರ್ಧಾರ ಬೆಂಬಲಿಸಿದ್ದು, ಸುರಕ್ಷತೆಗಾಗಿ ಕೇಂದ್ರ ತೆಗೆದುಕೊಂಡಿರುವ ನಿರ್ಧಾರ ಪಾಲಿಸಿ ಎಂದು ಹೇಳಿದ್ದಾರೆ.
ಬಾಲಿವುಡ್, ಕಾಲಿವುಡ್ ಸ್ಟಾರ್ಸ್ಗಳಿಂದಲೂ ಬೆಂಬಲ
ನಮೋ 21 ದಿನಗಳ ಲಾಕ್ಡೌನ್ ನಿರ್ಧಾರಕ್ಕೆ ಬಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲ ರಂಗಗಳಿಂದಲೂ ಬೆಂಬಲ ವ್ಯಕ್ತವಾಗಿದೆ.
ಅನಿಲ್ ಕಪೂರ್,ತಾಪ್ಸಿ ಪನು,ಮಹೇಶ್ ಭಟ್ಟ,ಸೋನಾಕ್ಷಿ ಸಿನ್ಹಾ,ಕಾಜಲ್ ಅಗರವಾಲ್,ರಿತೇಶ್ ದೇಶಮುಖ್,ಪವನ್ ಕಲ್ಯಾಣ್ ಹಾಗೂ ಇಮ್ರಾನ್ ಹಸ್ಮಿಂ ಸೇರಿದಂತೆ ಅನೇಕರು ಜೈಕಾರ ಹಾಕಿದ್ದಾರೆ.