ಅಮೃತಸರ್ (ಪಂಜಾಬ್): ಭಾರತೀಯ 208 ನಿವಾಸಿಗಳ ತಂಡ ಶನಿವಾರ ಅಮೃತಸರದ ಅಟ್ಟಾರಿ - ವಾಘಾ ಗಡಿ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ.
ಅಟ್ಟಾರಿ-ವಾಘಾ ಗಡಿ ಮೂಲಕ 208 ನಿವಾಸಿಗಳು ಪಾಕ್ನಿಂದ ವಾಪಸ್ "748 ಭಾರತೀಯರು ದೇಶಕ್ಕೆ ಮರಳಲು ನೋಂದಾಯಿಸಿಕೊಂಡಿದ್ದಾರೆ. ಅದರಲ್ಲಿ 208 ಭಾರತೀಯರು ಶನಿವಾರ ಸ್ವದೇಶಕ್ಕೆ ಮರಳಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ, ಭಾರತ ಮತ್ತು ಪಾಕಿಸ್ತಾನ ಇತರೆ ದೇಶಗಳಂತೆ ತಮ್ಮ ಗಡಿಗಳಿಗೆ ನಿರ್ಬಂಧ ಹಾಕಿದ್ದವು.
ಓದಿ:ವಾಘಾ ಗಡಿ ಮೂಲಕ 250 ನಿವಾಸಿಗಳು ಪಾಕ್ನಿಂದ ವಾಪಸ್
ಲಾಕ್‌ಡೌನ್ ಘೋಷಣೆಗಿಂತ ಮುಂಚಿತವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಮತ್ತು ಅಲ್ಲಿ ಉಳಿದುಕೊಂಡಿದ್ದ ಭಾರತೀಯ ನಾಗರಿಕರಲ್ಲಿ 748 ಜನರು ಅಟ್ಟಾರಿ - ವಾಘಾ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 271 ನಿವಾಸಿಗಳ ಗುಂಪು ಶುಕ್ರವಾರ ಅಟ್ಟಾರಿ - ವಾಘಾ ಗಡಿ ಮೂಲಕ ದೇಶಕ್ಕೆ ಮರಳಿದ್ದರು.