ಕರ್ನಾಟಕ

karnataka

ETV Bharat / bharat

2021ರ ಪಂಚರಾಜ್ಯ ಚುನಾವಣೆ: ರಾಜ್ಯ ಕೈ ನಾಯಕರಿಗೆ ಹೆಚ್ಚಿನ ಹೊಣೆ ನೀಡಿದ ಹೈಕಮಾಂಡ್​! - ಕಾಂಗ್ರೆಸ್​ ಹಿರಿಯ ಮುಖಂಡರು

ಪಂಚರಾಜ್ಯ ಚುನಾವಣೆಗೆ ಕೈ ಹೈಕಮಾಂಡ್​ ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ವೀರಪ್ಪ ಮೊಯ್ಲಿ, ಜಿ.ಪರಮೇಶ್ವರ್​ಗೆ ಮಣೆ ಹಾಕಿದೆ.

2021ರ ಪಂಚರಾಜ್ಯ ಚುನಾವಣೆ
2021ರ ಪಂಚರಾಜ್ಯ ಚುನಾವಣೆ

By

Published : Jan 6, 2021, 6:21 PM IST

ನವದೆಹಲಿ:2021ರಲ್ಲಿ ನಡೆಯಲಿರುವ ಪಂಚರಾಜ್ಯ ಚುನಾವಣೆಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಅದಕ್ಕಾಗಿ ರಾಜ್ಯದ ಕೆಲ ಪ್ರಮುಖ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿದೆ.

ಪ್ರಮುಖರಿಗೆ ಮಣೆ ಹಾಕಿದ ಕಾಂಗ್ರೆಸ್​

ಈ ವರ್ಷ ಅಸ್ಸೋಂ, ಕೇರಳ, ತಮಿಳುನಾಡು, ಪುದುಚೇರಿ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕಾಗಿ ಕೆಲ ಹಿರಿಯ ನಾಯಕರನ್ನು ಚುನಾವಣಾ ಪ್ರಚಾರ ನಿರ್ವಹಣೆ, ಸಮನ್ವಯ ಮೇಲ್ವಿಚಾರಣೆ ಹಾಗೂ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. ಪ್ರಮುಖವಾಗಿ ಕಾಂಗ್ರೆಸ್​ನ ಭೂಪೇಶ್ ಬಾಗೆಲ್, ಮುಕುಲ್ ವಾಸ್ನಿಕ್, ಅಶೋಕ್ ಗೆಹ್ಲೋಟ್, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಇದರಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.

ಅಸ್ಸೋಂ ಚುನಾವಣೆ ಕಾಂಗ್ರೆಸ್ ವೀಕ್ಷಕರು: ಭೂಪೇಶ್​ ಬಾಗೆಲ್​, ಮುಕುಲ್​ ವಾಸ್ನಿಕ್​, ಶಕೀಲ್​ ಅಹ್ಮದ್​ ಖಾನ್​

ಕೇರಳ ಚುನಾವಣೆ:ಅಶೋಕ್​ ಗೆಹ್ಲೊಟ್​, ಡಾ. ಜಿ.ಪರಮೇಶ್ವರ್​

ತಮಿಳುನಾಡು &ಪುದುಚೇರಿ ಚುನಾವಣೆ:ವೀರಪ್ಪ ಮೊಯ್ಲಿ, ಪಾಲಂ ರಾಜು, ನೀತಿನ್​ ರಾವತ್​

ಪಶ್ಚಿಮ ಬಂಗಾಳ ಚುನಾವಣೆ: ಬಿ.ಕೆ.ಹರಿಪ್ರಸಾದ್, ಆಲ್ಮಗಿರ್​, ವಿಜಯ್​ ಇಂದಿರಾ ಸಿಂಗ್​​

ABOUT THE AUTHOR

...view details