ಈ ವರ್ಷವು ನಿಮಗೆ ತೊಂದರೆ ಮತ್ತು ಸುಂದರ ನೆನಪುಗಳು ಎರಡನ್ನೂ ನೀಡಬಹುದು. ನಿಮ್ಮ ಜೀವನದಲ್ಲಿ ಸಕಾರಾತ್ಮಕ ಚಿಂತನೆಯೊಂದಿಗೆ ಮುಂದುವರಿಯಬೇಕು. ಈ ವರ್ಷಪೂರ್ತಿ ನಿಮ್ಮ ಭಾವನೆಗಳು ಇಳಿಮುಖವಾಗಬಹುದು ಮತ್ತು ಪರಿಣಾಮವಾಗಿ ನಿಮ್ಮ ಪ್ರೀತಿಪಾತ್ರರೊಂದಿಗೆ ಅಂತರದಲ್ಲಿ ಇರುವಿರಿ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಪ್ರೀತಿಪಾತ್ರರ ದೃಷ್ಟಿಕೋನದಿಂದಲೂ ಯೋಚಿಸಬೇಕು. ಉದ್ಯೋಗಿಗಳಿಗೆ ಅವರ ಕಾರ್ಯಸ್ಥಳದಲ್ಲಿ ಕೆಲವು ಬದಲಾವಣೆಗಳು ಆಗಲಿವೆ, ಇದು ಅವರಿಗೆ ದೀರ್ಘಾವಧಿಯಲ್ಲಿ ಪ್ರಯೋಜನ ನೀಡಬಹುದು. ನಿಮಗೆ ಅಧಿಕ ಕಾರ್ಯದೊತ್ತಡ ಉಂಟಾಗಬಹುದು, ಮತ್ತು ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು, ಆದರೂ ಫೆಬ್ರವರಿಯಿಂದ ಪರಿಸ್ಥಿತಿಗಳು ಸುಧಾರಿಸುತ್ತವೆ. ಅದರ ನಂತರ ನೀವು ಹೆಚ್ಚು ಉತ್ಸಾಹ ಹೊಂದುವಿರಿ, ಆದರೆ ನಿಮ್ಮ ಸಹೋದ್ಯೋಗಿಗಳೊಂದಿಗಿನ ಸಮಸ್ಯೆಯನ್ನು ತಪ್ಪಿಸಲು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಕರ್ಕಾಟಕ ರಾಶಿಯವರಿಗೆ ಈ ವರ್ಷ ಹೇಗಿದೆ..? - 2020 ಕರ್ಕಾಟಕ ರಾಶಿಯವರ ವರ್ಷದ ರಾಶಿಭವಿಷ್ಯ
ಉದ್ಯೋಗಿಗಳಿಗೆ ಅವರ ಕಾರ್ಯಸ್ಥಳದಲ್ಲಿ ಕೆಲವು ಬದಲಾವಣೆಗಳು ಆಗಲಿವೆ, ಇದು ಅವರಿಗೆ ದೀರ್ಘಾವಧಿಯಲ್ಲಿ ಪ್ರಯೋಜನ ನೀಡಬಹುದು. ನಿಮಗೆ ಅಧಿಕ ಕಾರ್ಯದೊತ್ತಡ ಉಂಟಾಗಬಹುದು, ಮತ್ತು ಕೆಲಸಗಳನ್ನು ಪೂರ್ಣಗೊಳಿಸಲು ಕಷ್ಟವಾಗಬಹುದು, ಆದರೂ ಫೆಬ್ರವರಿಯಿಂದ ಪರಿಸ್ಥಿತಿಗಳು ಸುಧಾರಿಸುತ್ತವೆ.
![ಕರ್ಕಾಟಕ ರಾಶಿಯವರಿಗೆ ಈ ವರ್ಷ ಹೇಗಿದೆ..? 2020 Cancer Astrology](https://etvbharatimages.akamaized.net/etvbharat/prod-images/768-512-5579817-thumbnail-3x2-varshabhavishya.jpg)
ಪಾಲುದಾರಿಕೆ ವ್ಯವಹಾರ ಅಥವಾ ಕೆಲಸ ಫೆಬ್ರವರಿ ನಂತರ ವಿಳಂಬವಾಗಬಹುದು ಆದ್ದರಿಂದ ಅವುಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ. ಸಂಬಂಧಗಳಿಗೆ, ಈ ವರ್ಷ ನಿಮಗೆ ಅನುಕೂಲಕರವಾಗಿರುತ್ತದೆ, ವರ್ಷದ ಮಧ್ಯಭಾಗ ನಿಮ್ಮ ಪ್ರೀತಿ ಜೀವನಕ್ಕೆ ಹೆಚ್ಚು ಅನುಕೂಲಕರವಾಗಿರುತ್ತದೆ. ನೀವು ಏನಾದರೂ ಹೊಸದನ್ನು ಮಾಡಲು ಪ್ರಯತ್ನಿಸಬಹುದು ಮತ್ತು ನಿಮ್ಮ ಪ್ರೀತಿ ಜೀವನವನ್ನು ಸುಧಾರಿಸಲು ಶ್ರಮಪಡಬಹುದು. ನಿಮ್ಮ ಸಂಗಾತಿ ಕೂಡಾ ಪರಸ್ಪರ ಸಂತೋಷವಾಗಿರಲು ಉಡುಗೊರೆಗಳನ್ನು ನೀಡಬಹುದು. ಸೆಪ್ಟೆಂಬರ್‌ವರೆಗೆ ಸಾಲವಾಗಿ ಯಾರಿಗೂ ಹಣ ನೀಡದಂತೆ ನಿಮಗೆ ಸಲಹೆ ನೀಡಲಾಗುತ್ತದೆ. ಈ ವರ್ಷದ ಕೊನೆಯ ಹಂತದಲ್ಲಿ ನೀವು ಅಪರಿಚಿತರಿಂದ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ.
ನೀವು ಷೇರು ಮಾರುಕಟ್ಟೆ ಅಥವಾ ಜೂಜಿನಲ್ಲಿ ತೊಡಗಿದ್ದಲ್ಲಿ, ಸೆಪ್ಟೆಂಬರ್ ನಂತರ ನೀವು ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಏಕೆಂದರೆ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆಯು ಅಧಿಕವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ವರ್ಷ ಅದ್ಭುತವಾಗಿರುತ್ತದೆ, ಆದರೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದಲ್ಲಿ, ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಬೇಜವಾಬ್ದಾರಿ ಹೊಂದಿರುವುದಕ್ಕಾಗಿ ಬೆಲೆ ತೆರಬೇಕಾಗುತ್ತದೆ. ಸೆಪ್ಟೆಂಬರ್ ತಿಂಗಳ ಬಳಿಕ, ಸಣ್ಣ ಸಮಸ್ಯೆಗಳು ದೊಡ್ಡದಾಗುವ ಸಾಧ್ಯತೆಯಿರುವುದರಿಂದ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಈ ವರ್ಷ ನೀವು ಮಧುಮೇಹ ಅಥವಾ ಬೊಜ್ಜು ಸಮಸ್ಯೆಯನ್ನು ಎದುರಿಸಬಹುದು.