ಕರ್ನಾಟಕ

karnataka

ETV Bharat / bharat

ಸುಪ್ರೀಂಕೋರ್ಟ್​​ನಿಂದ ವಿನಯ್​ ಶರ್ಮಾ ಅರ್ಜಿ ತಿರಸ್ಕಾರ... ಗಲ್ಲು ಶಿಕ್ಷೆ ಫಿಕ್ಸ್​! - ವಿನಯ್​ ಕುಮಾರ್​ ಶರ್ಮಾ

2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಅಪರಾಧಿ ವಿನಯ್​ ಶರ್ಮಾ ಸುಪ್ರೀಂಕೋರ್ಟ್​ನಲ್ಲಿ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ ನಿರ್ಣಯದ ವಿರುದ್ಧ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದು, ಇದೀಗ ಅದರ ತೀರ್ಪು ಸಹ ಹೊರಬಿದ್ದಿದೆ.

2012 Delhi gang-rape case
2012 Delhi gang-rape case

By

Published : Feb 14, 2020, 2:50 PM IST

ನವದೆಹಲಿ: ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯ ಕ್ಷಮದಾನ ಅರ್ಜಿ ರಾಷ್ಟ್ರಪತಿಗಳಿಂದ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿದ್ದ ಅರ್ಜಿ ಇದೀಗ ಸುಪ್ರೀಂನಿಂದಲೂ ವಜಾಗೊಂಡಿದೆ.

ನಾಲ್ವರು ಅಪರಾಧಿಗಳಲ್ಲಿ ಒಬ್ಬನಾಗಿರುವ ವಿನಯ್​ ಕುಮಾರ್​ ಶರ್ಮಾ, ಮರಣದಂಡನೆ ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಬೇಕು. ಜೈಲಿನಲ್ಲಿ ನೀಡುತ್ತಿರುವ ಹಿಂಸೆಯಿಂದ ನನ್ನ ಆರೋಗ್ಯ ಸಂಪೂರ್ಣವಾಗಿ ಹಾಳಾಗಿದ್ದು, ಮರಣದಂಡನೆಯನ್ನ ಜೀವಾವಧಿ ಶಿಕ್ಷೆಗೆ ಪರಿವರ್ತನೆ ಮಾಡಬೇಕು ಎಂದು ಸುಪ್ರೀಂಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ಸಂಬಂಧದ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್​​ ಈ ಅರ್ಜಿಯನ್ನ ತಿರಸ್ಕರಿಸಿದೆ. ಇದೇ ವೇಳೆ, ವೈದ್ಯಕೀಯ ವರದಿ ಪ್ರಕಾರ ಅವರು ಆರೋಗ್ಯವಾಗಿದ್ದು, ದೈಹಿಕವಾಗಿ ಫಿಟ್​ ಆಗಿದ್ದಾರೆ ಎಂಬ ಮಾಹಿತಿಯನ್ನು ನೀಡಿದೆ.

ಫೆಬ್ರವರಿ 1ರಂದು ವಿನಯ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್ ತಿರಸ್ಕರಿಸಿದ್ದರು. ಅರ್ಜಿ ತಿರಸ್ಕೃತವಾದ ಕಾರಣಕ್ಕೆ ಮಂಗಳವಾರ ವಿನಯ್​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ. ಸುಪ್ರೀಂ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠವು ಅರ್ಜಿ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ.

ABOUT THE AUTHOR

...view details