ನವದೆಹಲಿ:ನಾಳೆ ನಡೆಯಲಿರುವ ಮರಣದಂಡನೆ ಶಿಕ್ಷೆಯನ್ನು ತಡೆ ಹಿಡಿಯಬೇಕೆಂದು ನಿರ್ಭಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಪಟಿಯಾಲ ಹೌಸ್ ನ್ಯಾಯಾಲಯ ಇಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ನಿರ್ಭಯ ಪ್ರಕರಣ: ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನಲ್ಲಿ ಇಂದು ಮತ್ತೆ ವಿಚಾರಣೆ - Delhi's Patiala House Court
ಫೆಬ್ರವರಿ 1ರಂದು ನಡೆಯಲಿರುವ ಮರಣದಂಡನೆಯನ್ನು ತಡೆ ಹಿಡಿಯಬೇಕೆಂದು ನಿರ್ಭಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಪಟಿಯಾಲ ಹೌಸ್ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.
ಅಪರಾಧಿಗಳಾದ ಅಕ್ಷಯ್ ಠಾಕೂರ್ ಮತ್ತು ವಿನಯ್ ಶರ್ಮಾ ಪರ ವಕೀಲ ಎ. ಪಿ. ಸಿಂಗ್ ಈ ಅರ್ಜಿ ಸಲ್ಲಿಸಿದ್ದಾರೆ.ಈ ಅರ್ಜಿಯ ಕುರಿತು ನ್ಯಾಯಾಲಯ ಗುರುವಾರ ತಿಹಾರ್ ಜೈಲು ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಇಂದು ಬೆಳಿಗ್ಗೆ 10 ಗಂಟೆಯ ಮೊದಲು ಸ್ಥಿತಿಗತಿ ವರದಿ ಸಲ್ಲಿಸುವಂತೆ ಜೈಲಾಧಿಕಾರಿಗಳಿಗೆ ಸೂಚಿಸಿದೆ.
ಅಕ್ಷಯ್ ಠಾಕೂರ್, ಮುಖೇಶ್ ಸಿಂಗ್, ಪವನ್ ಗುಪ್ತಾ ಮತ್ತು ವಿನಯ್ ಕುಮಾರ್ ಶರ್ಮಾ ಎಂಬ ನಾಲ್ವರನ್ನು ಫೆಬ್ರವರಿ 1 ರಂದು ಗಲ್ಲಿಗೇರಿಸಲಾಗುವುದು ಎಂದು ದೆಹಲಿ ಕೋರ್ಟ್ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿತ್ತು. ಆದರೆ, ದೆಹಲಿ ಜೈಲು ನಿಯಮಗಳ ಪ್ರಕಾರ, ಕ್ಷಮಾಪಣೆ ಅರ್ಜಿ ಸೇರಿದಂತೆ ಎಲ್ಲಾ ಕಾನೂನು ಪ್ರಕ್ರಿಯೆಗಳು ಸಂಪೂರ್ಣವಾಗುವವರೆಗೂ ಶಿಕ್ಷೆಗೊಳಗಾದ ಯಾರನ್ನೂ ಗಲ್ಲಿಗೇರಿಸಲಾಗುವುದಿಲ್ಲ ಎಂದು ಸಿಂಗ್ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.