ಜೈಪುರ್: 2008ರಲ್ಲಿ ರಾಜಸ್ಥಾನದ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಐವರು ಆರೋಪಿಗಳ ಪೈಕಿ ನಾಲ್ವರು ದೋಷಿ ಹಾಗೂ ಓರ್ವ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದೆ.
ಘಟನೆಯ ಬಳಿಕ ಮುಜಾಹಿದ್ದೀನ್ ಉಗ್ರವಾದಿ ಸಂಘಟನೆ ಸ್ಪೋಟದ ಹೊಣೆ ಹೊತ್ತುಕೊಂಡಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿತನಾಗಿದ್ದ ಶಹಬಾಜ್ ಹುಸೇನ್ ಅಲಿಯಾಸ್ ಶಹಬಾಜ್ ಅಹ್ಮದ್ ಅಲಿಯಾಸ್ ಶಾನು ಖುಲಾಸೆಗೊಂಡಿದ್ದಾನೆ.