ಕರ್ನಾಟಕ

karnataka

ETV Bharat / bharat

ಗುಜರಾತ್​ನಿಂದ ಕರ್ನಾಟಕಕ್ಕೆ 2,000 ಟನ್​​ ಸೆರಾಮಿಕ್ ಟೈಲ್ಸ್ ಸಾಗಣೆ - The Business Development Unit of the Western Railway Division

ಟೈಲ್ಸ್​ಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಗುಜರಾತ್‌ನ ಮೊರ್ಬಿ ಜಿಲ್ಲೆಯಿಂದ 2,000 ಟನ್​ಗಳಷ್ಟು ಸೆರಾಮಿಕ್ ಟೈಲ್ಸ್ ಅನ್ನು ಕರ್ನಾಟಕಕ್ಕೆ ಸಾಗಣೆ ರೈಲಿನ ಮೂಲಕ ಸಾಗಿಸಲಾಗಿದೆ.

Indian railway
ಗುಜರಾತ್​ನಿಂದ ಕರ್ನಾಟಕಕ್ಕೆ ಬಂತು 2,000 ಟನ್​​ ಸೆರಾಮಿಕ್ ಟೈಲ್ಸ್

By

Published : Dec 13, 2020, 5:06 PM IST

ಮೊರ್ಬಿ (ಗುಜರಾತ್​): ಕೋವಿಡ್​ ಲಾಕ್​ಡೌನ್​ ಬಳಿಕ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಭಾರತೀಯ ರೈಲ್ವೆ ಈಗ ನಷ್ಟವನ್ನು ಸರಿದೂಗಿಸಲು ಸರಕು ಸಾಗಣೆ ವ್ಯವಹಾರದತ್ತ ಗಮನ ಹರಿಸುತ್ತಿದೆ.

ಪಶ್ಚಿಮ ರೈಲ್ವೆ ವಿಭಾಗದ ವ್ಯವಹಾರ ಅಭಿವೃದ್ಧಿ ಘಟಕವು (ಬಿಡಿಯು) ಟೈಲ್ಸ್​ಗಳ ಉತ್ಪಾದನೆಗೆ ಹೆಸರುವಾಸಿಯಾಗಿರುವ ಗುಜರಾತ್‌ನ ಮೊರ್ಬಿ ಜಿಲ್ಲೆಯಿಂದ 2,000 ಟನ್​ಗಳಷ್ಟು ಸೆರಾಮಿಕ್ ಟೈಲ್ಸ್ ಅನ್ನು ಕರ್ನಾಟಕದ ಬೆಂಗಳೂರಿನ ಮಾರನಾಯಕನಹಳ್ಳಿಗೆ ಸರಕು ಸಾಗಣೆ ರೈಲಿನ ಮೂಲಕ ಸಾಗಿಸಿದೆ.

ಒಟ್ಟು 68 ಕಂಟೇನರ್‌ಗಳನ್ನು ಲೋಡ್ ಮಾಡಲಾಗಿದೆ. ಈ ಮೂಲಕ ಅಂದಾಜು 38 ಲಕ್ಷ ರೂಪಾಯಿ ಆದಾಯವನ್ನು ರೈಲ್ವೆ ಇಲಾಖೆ ಪಡೆದಿದೆ ಎಂದು ಹೇಳಲಾಗಿದೆ. ಹೀಗೆ ಸರಕುಗಳನ್ನು ರೈಲುಗಳಲ್ಲಿ ಸಾಗಿಸುವುದರಿಂದ ಹೆದ್ದಾರಿಗಳಲ್ಲಿ ಟ್ರಾಫಿಕ್​ ಜಾಮ್​ನಿಂದ ಪಾರಾಗಿ ಸಮಯ ಉಳಿತಾಯವಾಗಲಿದೆ ಹಾಗೂ ಮಾಲಿನ್ಯ ಕಡಿಮೆಯಾಗಲಿದೆ.

ಓದಿ:400 ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್​​ನಲ್ಲಿ​​ ಟೀ ವಿತರಣೆ

ಪಶ್ಚಿಮ ರೈಲ್ವೆ ವಿಭಾಗದಡಿ ಬರುವ ರಾಜ್‌ಕೋಟ್ ವಿಭಾಗವು ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ತನ್ನ ಸರಕು ಸಾಗಣೆ ಸೇವೆ ಆರಂಭಿಸಿದೆ. ಇಂದು ಬೆಂಗಳೂರಿಗೆ ರೈಲು ಕಳುಹಿಸಿದ್ದು, ಶೀಘ್ರದಲ್ಲೇ ಮಂಗಳೂರಿಗೂ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದೆ.

ABOUT THE AUTHOR

...view details