ಕರ್ನಾಟಕ

karnataka

ETV Bharat / bharat

ಕೆಳಜಾತಿ ಹುಡುಗಿಯ ಮೇಲೆ ಮೇಲ್ಜಾತಿಯ ನಾಲ್ವರು ಕಾಮುಕರ ಅತ್ಯಾಚಾರ: ಯುವತಿ ಸ್ಥಿತಿ ಗಂಭೀರ - ಉತ್ತರ ಪ್ರದೇಶ ಸುದ್ದಿ

ನಾಲ್ವರು ಕಾಮುಕರು 20 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದು, ತದನಂತರ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

20-year-old woman rape
20-year-old woman rape

By

Published : Sep 26, 2020, 8:42 PM IST

ಲಕ್ನೋ: ಪಶ್ಚಿಮ ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ 20 ವರ್ಷದ ಯುವತಿಯೋರ್ವಳ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ತದನಂತರ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಕೆಳಜಾತಿಗೆ ಸೇರಿದ ಯುವತಿ ಮೇಲೆ ಮೇಲ್ಜಾತಿಗೆ ಸೇರಿರುವ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎನ್ನಲಾಗುತ್ತಿದ್ದು, ಸಂತ್ರಸ್ತ ಮಹಿಳೆ ಸದ್ಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ. ಅತ್ಯಾಚಾರವೆಸಗಿರುವ ಕಾಮುಕರು ಮಹಿಳೆ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ್ದು, ಆಕೆಯ ನಾಲಿಗೆ ಕತ್ತರಿಸಿದ್ದಾರೆ. ಸದ್ಯ ಯುವತಿ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೃತ್ಯವೆಸಗಿರುವ ನಾಲ್ವರು ಆರೋಪಿಗಳನ್ನ ಈಗಾಗಲೇ ಬಂಧನ ಮಾಡಿರುವ ಪೊಲೀಸರು, ಜೈಲಿಗೆ ಕಳುಹಿಸಿದ್ದಾರೆ. ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಸಹೋದರಿ, ಸಹೋದರ ಹಾಗೂ ತಾಯಿ ಹೊಲಕ್ಕೆ ಹೋಗಿದ್ದರು. ಈ ವೇಳೆ ಮೇವು ತೆಗೆದುಕೊಂಡು ಸಹೋದರ ಮೊದಲು ಮನೆಗೆ ತೆರಳಿದ್ದಾನೆ. ಇದಾದ ಬಳಿಕ ತಾಯಿ-ಮಗಳು ಮನೆಗೆ ಹೋಗುತ್ತಿದ್ದ ವೇಳೆ ತಾಯಿ ಸ್ವಲ್ಪ ಮುಂದೆ ಹೋಗಿದ್ದಾಳೆ. ಇದೇ ಸಮಯದಲ್ಲಿ ನಾಲ್ವರು ಕಾಮುಕರು ಆಕೆಯ ದುಪಟ್ಟಾ ಹಿಡಿದು ಎಳೆದು ನಿರ್ಜನ ಪ್ರದೇಶದಲ್ಲಿ ದುಷ್ಕೃತ್ಯವೆಸಗಿದ್ದಾಗಿ ತಿಳಿದು ಬಂದಿದೆ.

ಮಗಳು ಕಾಣೆಯಾಗಿದ್ದಾಳೆಂದು ಹುಡುಕಲು ಮುಂದಾದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ವೇಳೆ ಅತ್ಯಾಚಾರವೆಸಗಿರುವ ಮಾಹಿತಿ ಗೊತ್ತಾಗಿದೆ.

ABOUT THE AUTHOR

...view details