ಕರ್ನಾಟಕ

karnataka

ETV Bharat / bharat

ಪಿಸ್ತೂಲ್​ನಿಂದ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರ! - ಅತ್ಯಾಚಾರ ಲೇಟೆಸ್ಟ್ ನ್ಯೂಸ್

ಪಿಸ್ತೂಲ್​ನಿಂದ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ​ನಗರದಲ್ಲಿ ಬೆಳಕಿಗೆ ಬಂದಿದೆ.

20-year-old woman raped
ಯುವತಿ ಮೇಲೆ ಅತ್ಯಾಚಾರ

By

Published : Jun 4, 2020, 3:43 PM IST

ಮುಜಫರ್​ನಗರ (ಉತ್ತರ ಪ್ರದೇಶ): ಮುಜಫರ್​ನಗರ ಜಿಲ್ಲೆಯ ತನ್ನ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಪಿಸ್ತೂಲ್​ನಿಂದ ಬೆದರಿಸಿ ತನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು 20 ವರ್ಷದ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಚಾರ್ತವಾಲ್ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್​ ಸುಬೆ ಸಿಂಗ್ ತಿಳಿಸಿದ್ದಾರೆ.

ಬುಧವಾರ ಮಗಳು ಒಬ್ಬಂಟಿಯಾಗಿರುವಾಗ ನೆರೆಮನೆಯ ಕಾಮುಕನೊಬ್ಬ ಮನೆಗೆ ನುಗ್ಗಿ ಪಿಸ್ತೂಲ್ ತೋರಿಸಿ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆಯ ತಂದೆ ದೂರಿನಲ್ಲಿ ವಿವರಿಸಿದ್ದಾರೆ.

ABOUT THE AUTHOR

...view details