ಕರ್ನಾಟಕ

karnataka

ETV Bharat / bharat

20ರ ಯುವಕನೊಂದಿಗೆ 60ರ ಮಹಿಳೆ ಮ್ಯಾರೇಜ್​... ರಾಂಗ್​ ನಂಬರ್​​ ಮೂಲಕ ಶುರುವಾಯ್ತು ಪ್ರೀತಿ! - ಉತ್ತರಪ್ರದೇಶದ ರಾಂಪೂರ್

ಉತ್ತರಪ್ರದೇಶದ ರಾಂಪೂರ್​​ದಲ್ಲಿ ವಿಚಿತ್ರವಾದ ಘಟನೆವೊಂದು ನಡೆದಿದ್ದು, ರಾಂಗ್​ ನಂಬರ್​ ಮೂಲಕ ಶುರುವಾದ ಪ್ರೀತಿ ಮ್ಯಾರೇಜ್​ ಮೂಲಕ ಮತ್ತೊಂದು ರೂಪ ಪಡೆದುಕೊಂಡಿದೆ.

20 year old boy married 60 year old widow woman in uttarpradesh
20ರ ಯುವಕನೊಂದಿಗೆ 60ರ ಮಹಿಳೆ ಮ್ಯಾರೇಜ್

By

Published : Jan 21, 2020, 3:09 AM IST

ರಾಂಪೂರ್​​(ಉತ್ತರಪ್ರದೇಶ): ಹದಿಹರೆಯದ ಯುವಕ-ಯುವತಿ ನಡುವೆ ಪ್ರೇಮಾಂಕುರವಾಗಿ ಮ್ಯಾರೇಜ್​ ಆಗುವುದು ಸರ್ವೆ ಸಾಮಾನ್ಯ. ಆದರೆ ಉತ್ತರಪ್ರದೇಶದಲ್ಲಿ ನಡೆದಿರುವ ಘಟನೆ ನೋಡಿದ್ರೆ ಪ್ರೀತಿಗೆ ಕಣ್ಣಿಲ್ಲಿ ಎಂಬ ಮಾತು ಅಕ್ಷರಶ ನಿಜ ಎಂದು ಅನಿಸುತ್ತದೆ.

ಉತ್ತರಪ್ರದೇಶದ ರಾಂಪೂರ್​ದಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಯುವಕನೋರ್ವ 60 ವರ್ಷದ ಮಹಿಳೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಎರಡು ವರ್ಷಗಳ ಪ್ರೇಮದ ನಂತರ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಏನಿದು ಘಟನೆ!?
ಉತ್ತರಪ್ರದೇಶದ ಜಠಪುರ್​ ಗ್ರಾಮದ 60 ವರ್ಷದ ಯುವತಿ ಕೇಸರ್ವತಿ ಹಾಗೂ ಹರದೋಹಿಯಲ್ಲಿ ವಾಸವಾಗಿದ್ದ 20 ವರ್ಷದ ಯುವಕ ರಾಕೇಶ್​ ನಡುವೆ ನಡೆದ ಅಪರೂಪದ ಘಟನೆಯಾಗಿದೆ. ಎರಡು ವರ್ಷದ ಹಿಂದೆ 60 ವರ್ಷದ ಮಹಿಳೆ ಫೋನ್​​ನಿಂದ ಮಿಸ್​​ ಕಾಲ್​​ 20 ವರ್ಷದ ರಾಕೇಶ್​ಗೆ ಹೋಗಿದ್ದು, ಅಲ್ಲಿಂದ ಪ್ರತಿದಿನ ಇಬ್ಬರ ನಡುವೆ ಗೆಳೆತನ ಶುರುವಾಗಿದೆ. ಇದಾದ ಬಳಿಕ ಅದು ಪ್ರೀತಿಗೆ ತಿರುಗಿದ್ದು, ದಿನ ಕಳೆದಂತೆ ವಿಡಿಯೋ ಕಾಲ್​​ನಲ್ಲೂ ಇಬ್ಬರು ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಸಹ ತೆಗೆದುಕೊಂಡಿದ್ದಾರೆ.

ಅದರಂತೆ ಕಳೆದ ಶನಿವಾರ 60 ವರ್ಷದ ಯುವತಿ ಮನೆಗೆ ಆಗಮಿಸಿರುವ ಹುಡುಗ ಮದುವೆ ಸಹ ಮಾಡಿಕೊಂಡಿದ್ದಾನೆ. ಕೇಸರ್ವತಿ ವಿಧವೆಯಾಗಿದ್ದು, ಆಕೆಯ ಗಂಡ ತೀರಿಕೊಂಡಿದ್ದಾನೆ. ಇನ್ನು ಈಗಾಗಲೇ ಯುವತಿಗೆ ಓರ್ವ ಮಗಳಿದ್ದು, ನಾಲ್ಕು ವರ್ಷದ ಹಿಂದೆ ಆಕೆ ಮದುವೆ ಸಹ ಆಗಿದೆ.

ABOUT THE AUTHOR

...view details