ಕರ್ನಾಟಕ

karnataka

ETV Bharat / bharat

ಶುಕ್ರವಾರದ ಈ ದಿನ ಲಕ್ಷ್ಮಿ ಕಟಾಕ್ಷ ಯಾವ ರಾಶಿಯವರಿಗೆ ಲಭಿಸಲಿದೆ...? - 20 November 2020 Etv Bharat horoscope

ಶುಕ್ರವಾರದ ದಿನಭವಿಷ್ಯ

20 November 2020 Friday Astrology
20 ನವೆಂಬರ್ 2020 ಈಟಿವಿ ಭಾರತ ರಾಶಿಫಲ

By

Published : Nov 20, 2020, 5:00 AM IST

ಮೇಷ

ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬಾಧ್ಯತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ಬಿಡುವು ಪಡೆದು ನಿಮಗಾಗಿ ಕೊಂಚ ಏನಾದರೂ ಮಾಡುವ ಸಮಯ. ನಿಮ್ಮ ಆರೋಗ್ಯದ ಕಡೆಗೆ ಗಮನ ನೀಡಬೇಕು.

ವೃಷಭ

ಇಂದು ನಿಮ್ಮ ಗೋಜಲುಗಳಿಂದ ಬಿಡಿಸಿಕೊಂಡು ಹೊರಹೋಗುವ ದಿನ. ನೀವು ಇತರರ ಕೆಲಸಕ್ಕೆ ಆಕ್ಷೇಪಣೆಗೆ ಒಳಗಾಗುತ್ತೀರಿ. ಮಧ್ಯಾಹ್ನದ ವೇಳೆಗೆ ವಿಷಯಗಳು ಆಶಾಭಂಗ ತರಬಹುದು, ಮತ್ತು ನಿಮ್ಮ ವಿಶ್ವಾಸದ ಮಟ್ಟ ಕುಸಿಯಬಹುದು. ನಿಮ್ಮ ಶಕ್ತಿಯ ಮೇಲೆ ಕೆಲಸ ಮಾಡಿ ನಿಮ್ಮ ದೌರ್ಬಲ್ಯವನ್ನು ನಿವಾರಿಸಿ.

ಮಿಥುನ

ನಿಮ್ಮ ಸಮಯವನ್ನು ಇಂದು ಇತರರು ಮತ್ತು ಅವರ ಪ್ರೇರಣೆಗಳನ್ನು ಕಂಡುಕೊಳ್ಳುವಲ್ಲಿ ಕಳೆಯುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಭದ್ರತೆ ಮತ್ತು ಹಣಕಾಸಿನ ವಿಷಯಗಳನ್ನು ಚರ್ಚಿಸುತ್ತಾ ಕಾಲ ಕಳೆಯುತ್ತೀರಿ. ನಿಮ್ಮ ಆರೈಕೆಯ ಸ್ವಭಾವದಿಂದಾಗಿ ಜನರ ಪ್ರೀತಿ ಮತ್ತು ಶ್ಲಾಘನೆ ಪಡೆಯುತ್ತೀರಿ.

ಕರ್ಕಾಟಕ

ಆತ್ಮೀಯ ಮಿತ್ರರು ನಿಮ್ಮ ಪ್ರವೃತ್ತಿಯಿಂದ ಸಂತೋಷಪಡುತ್ತಾರೆ. ನೀವು ಅವರನ್ನು ಸಂತೋಷವಾಗಿರಿಸಲು ಮತ್ತು ಅವರೊಂದಿಗೆ ಸಂತೋಷದ ಸಂಜೆ ಕಳೆಯಲು ಪ್ರಯತ್ನಿಸುತ್ತೀರಿ. ಪ್ರೀತಿ ಮತ್ತು ಸೌಹಾರ್ದ ಬಂಧಗಳು ದೀರ್ಘವಾಗಿರುತ್ತವೆ ಮತ್ತು ಫಲದಾಯಕವಾಗುತ್ತವೆ.

ಸಿಂಹ

ಈ ದಿನ ನೀವು ಮಿಶ್ರ ಫಲಿತಾಂಶ ಕಾಣಲಿದ್ದೀರಿ. ಬದಲಾವಣೆ ಹೊರತಾಗಿ ಯಾವುದೂ ಶಾಶ್ವತವಲ್ಲ ಎಂದು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಹರಿವಿನೊಂದಿಗೆ ಚಲಿಸಿರಿ ಮತ್ತು ನಿಮ್ಮ ಸುತ್ತಲೂ ಆಗುತ್ತಿರುವ ಬದಲಾವಣೆಗಳ ಅಂತಃಪ್ರವಾಹದಲ್ಲಿ ಸಿಲುಕಿಕೊಳ್ಳಬೇಡಿ.

ಕನ್ಯಾ

ಆರೋಗ್ಯದ ವಿಷಯಕ್ಕೆ ಬಂದರೆ ಕಾಲಹರಣ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಉತ್ಸಾಹದಲ್ಲಿದ್ದೀರಿ. ಆದರೆ, ಶಾಂತಿ ಮತ್ತು ಸಮಾಧಾನ ಇಂದಿನ ಪ್ರಭಾವಿ ಅಂಶಗಳು. ನೀವು ಪ್ರೀತಿಪಾತ್ರರೊಂದಿಗೆ ಹೊರಗೆ ಹೋಗಿ ಕಾಲ ಕಳೆಯಿರಿ.

ತುಲಾ

ನೀವು ಸದ್ಯದಲ್ಲೇ ತೀವ್ರ ಆಕಾಂಕ್ಷೆಯ ಪ್ರೀತಿಯಲ್ಲಿ ಸಿಲುಕಿಕೊಳ್ಳಬಹುದು. ಆದರೆ ಹೊಸ ಪ್ರೀತಿಗೆ ದಾರಿ ಸದಾ ಕಡಿದಾಗಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ನೀವು ಅತಿಯಾಗಿ ಖರ್ಚು ಮಾಡುವ ಸಾಧ್ಯತೆ ಇದೆ.

ವೃಶ್ಚಿಕ

ಋಣಾತ್ಮಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ಮುಕ್ತವಾಗಿಸಿ. ನಿಮ್ಮ ತಂಡದಲ್ಲಿ ಕೆಲಸ ಮಾಡಲು ನಿಮಗೆ ಅತ್ಯಂತ ಉತ್ಸಾಹ ಬೇಕು ಮತ್ತು ನಿಮ್ಮ ತಂಡದವರಿಗೆ ಸಮಾನ ಜವಾಬ್ದಾರಿಗಳನ್ನು ನೀಡಿ. ಸಾಮರ್ಥ್ಯ ಕಂಡುಕೊಂಡು ಅದಕ್ಕೆ ತಕ್ಕಂತೆ ಜವಾಬ್ದಾರಿ ನೀಡಿ. ಅವರ ಕೆಲಸದಲ್ಲಿ ನಂಬಿಕೆ ಇರಿಸಿ ಉಳಿದಿದ್ದು ಸುಸೂತ್ರವಾಗುತ್ತದೆ.

ಧನು

ನಿಮ್ಮ ಸಮಸ್ಯೆಗಳು ಶೀಘ್ರದಲ್ಲೇ ಕೊನೆಯಾಗಲಿದೆ. ವಿದೇಶದಿಂದ ಶುಭಸುದ್ದಿ ಅಥವಾ ಮಿತ್ರರಿಂದ ಬರುವ ಫೋನ್ ಕರೆ ನಿಮ್ಮ ಉತ್ಸಾಹ ಹೆಚ್ಚಿಸಲಿದೆ.

ಮಕರ

ಇಂದು ನಿಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಲಿದ್ದೀರಿ. ಬೌದ್ಧಿಕ ಪ್ರಗತಿ ಅಸಾಧಾರಣವಾಗಿದೆ. ಹಾಗೆಯೇ ನಿಮ್ಮ ಸ್ವಭಾವ ಕೂಡಾ. ನಿಮ್ಮ ಸ್ವಭಾವದಲ್ಲಿ ವಿಶ್ವಾಸವಿರಿಸಿ ಏಕೆಂದರೆ ಅದು ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತದೆ.

ಕುಂಭ

ಅನಿರೀಕ್ಷಿತವಾದುದನ್ನು ಇಂದು ನಿರೀಕ್ಷಿಸಿ. ಯಶಸ್ಸು, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಎಂದು ಭರವಸೆ ಕಳೆದುಕೊಳ್ಳುತ್ತೀರೋ ಅದು ನಿಮ್ಮ ದಾರಿಯಲ್ಲಿ ಬರುತ್ತದೆ. ಸಂಜೆಯಲ್ಲಿ, ಓದು, ಸಂಶೋಧನೆಯಲ್ಲಿ ಮುಳುಗಲಿದ್ದೀರಿ.

ಮೀನ

ಈ ದಿನ ನೀವು ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುತ್ತೀರಿ. ಮನೆ ನವೀಕರಣ ಯೋಜನೆಗಳಲ್ಲಿ ತೊಡಗಿಕೊಳ್ಳುವುದನ್ನು ನಿರೀಕ್ಷಿಸಿ, ಅಲ್ಲಿ ವೆಚ್ಚಗಳು ಏರುತ್ತವೆ. ಕಠಿಣ ದಿನದ ಕೆಲಸದ ನಂತರ ಪ್ರಶಂಸೆ ಮತ್ತು ಕೃತಜ್ಞತೆ ನಿಮ್ಮ ದಾರಿಯಲ್ಲಿ ಬರುತ್ತವೆ.

ABOUT THE AUTHOR

...view details