ಶ್ರೀನಗರ:ಭಾರತದ ಮುಕುಟಮಣಿ ಜಮ್ಮು ಕಾಶ್ಮೀರ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಭದ್ರತೆ ಸಡಲಿಕೆ ಬಳಿಕ ಜನತೆ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಪ್ರಸ್ತುತ ಕಾಶ್ಮೀರದ ಪರಿಸ್ಥಿತಿಯನ್ನು ಶಾಂತಗೊಳಿಸಲು ಇಬ್ಬರು ಮಹಿಳಾಮಣಿಗಳು ಮೇಲುಸ್ತುವಾರಿ ವಹಿಸಿಕೊಂಡಿದ್ದು, ಮಹತ್ವದ ಸ್ಥಾನದಲ್ಲಿರುವ ಆ ದಿಟ್ಟ ಮಹಿಳೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...
ಡಾ. ಸೈಯದ್ ಸೆಹರಿಶ್ ಅಸ್ಗರ್
2013ನೇ ಐಎಎಸ್ ಬ್ಯಾಚ್ನ ಡಾ. ಸೈಯದ್ ಸೆಹರಿಶ್ ಅಸ್ಗರ್ ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ದು, ಅಲ್ಲಿ ಜನಸಂಪರ್ಕದಲ್ಲಿದ್ದು ಸರ್ಕಾರದ ನೂತನ ಯೋಜನೆಗಳನ್ನು ಜನತೆಗೆ ತಿಳಿಸುವ ಮತ್ತು ಅರ್ಥೈಸುವ ಕಾರ್ಯ ಮಾಡಲಿದ್ದಾರೆ.
ಆರ್ಟಿಕಲ್ 370 ವಿಧಿವಶದ ಬಳಿಕ ಕಾಶ್ಮೀರದಲ್ಲಿ ಸೈಟ್ ಬೆಲೆ ಎಷ್ಟಾಗಿದೆ ಗೊತ್ತೆ?
ಡಾ. ಸೈಯದ್ ಸೆಹರಿಶ್ ಅಸ್ಗರ್ ಮಾಹಿತಿ ನಿರ್ದೇಶಕರಾಗಿ ನಿಯುಕ್ತರಾಗಿದ್ದಾರೆ. ಎಂಬಿಬಿಎಸ್ ಶಿಕ್ಷಣವನ್ನು ಅರ್ಧಕ್ಕೆ ತೊರೆದು ಯುಪಿಎಸ್ಸಿ ಪರೀಕ್ಷೆ ಬರೆದು ಇದೀಗ ಕಾಶ್ಮೀರದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಒಂದು ವರ್ಷದ ಮಗುವಿನ ತಾಯಿಯಾಗಿರುವ ಅಸ್ಗರ್, ಸದ್ಯ ಕೆಲಸ ಸವಾಲಿನಿಂದ ಕೂಡಿದ್ದು ಇದಕ್ಕೆ ಭಾವನಾತ್ಮಕ ಬೆಂಬಲದ ಅಗತ್ಯವವಿದೆ ಎಂದಿದ್ದಾರೆ.