ಚೆನ್ನೈ:ತಮಿಳುನಾಡಿನಲ್ಲಿ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಂಗಾಮ. ನಿನ್ನೆ ಪಂಚಾಯತ್ ಚುನಾವಣೆಯಲ್ಲಿ ಪದವಿ ಓದುತ್ತಿದ್ದ ಬೆಂಗಳೂರಿನ ವಿದ್ಯಾರ್ಥಿನಿ ಗೆದ್ದು ಕಮಾಲ್ ಮಾಡಿದ್ದರು. ಇಂದು ಪಂಚಾಯತ್ ಚುನಾವಣೆಯಲ್ಲಿ ಪಡಿತರ ಸಹಕಾರ ಸಂಘದ ಉದ್ಯೋಗಿ ಎಂ ಧನಶೇಖರನ್ ಎಂಬುವವರ ಇಬ್ಬರು ಪತ್ನಿಯರು ಸ್ವತಂತ್ರವಾಗಿ ಸ್ಪರ್ಧಿಸಿ ಕಮಾಲ್ ಮಾಡಿದ್ದಾರೆ.
ಎಲೆಕ್ಷನ್ನಲ್ಲಿ ಗೆದ್ದ ಇಬ್ಬರು ಪತ್ನಿಯರು ತಮಿಳುನಾಡಿನಲ್ಲಿ ಕನ್ನಡದ ಕುವರಿಯ ಕಮಾಲ್... ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ 21ರ ಯುವತಿ!
ಇಬ್ಬರೂ ಪತ್ನಿಯರು ಚುನಾವಣೆಯಲ್ಲಿ ಗೆದ್ದು ಪತಿಯ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದಾರೆ. ಅಂದ ಹಾಗೆ ಧನಶೇಖರನ್ ಅವರ ಮೊದಲ ಹೆಂಡತಿ ಸೆಲ್ವಿ(45) ವಾಜೂರು ಅಗ್ರಂ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಕಮಾಲ್ ಮಾಡಿದರೆ, ಎರಡನೇ ಹೆಂಡತಿ ಕಾಂಚನಾ ಕೊಯ್ಲಕುಪ್ಪಂ ಪಂಚಾಯತ್ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ.
ಎಲೆಕ್ಷನ್ನಲ್ಲಿ ಗೆದ್ದ ಇಬ್ಬರು ಪತ್ನಿಯರು ಚುನಾವಣೆ ಫಲಿತಾಂಶ ಬಂದ ಬಳಿ ಇಬ್ಬರ ಹೆಂಡರ ಮುದ್ದಿನ ಗಂಡ ಧನಶೇಖರನ್ ತನ್ನ ಇಬ್ಬರು ವಿಜಯೀ ಹೆಂಡತಿರೊಂದಿಗೆ ಫೋಟೋಗೆ ಫೋಸ್ ನೀಡಿ ಸಂಭ್ರಮಿಸಿದರು. ಇದು ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯ ಹೈಲೈಟ್ ಆಗಿತ್ತು.