ಕರ್ನಾಟಕ

karnataka

ETV Bharat / bharat

ಅಮೆರಿಕ ಸೇನಾ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ... ಇರಾನ್​​ನಿಂದ ನಡೀತು ಕೃತ್ಯ! - ಅಮೆರಿಕಾ-ಇರಾಕ್​ ನಡುವೆ ಯುದ್ಧದ ಸ್ಥಿತಿ

ಅಮೆರಿಕಾ - ಇರಾನ್​​ ನಡುವೆ ಯುದ್ಧದ ಸ್ಥಿತಿ ನಿರ್ಮಾಣಗೊಂಡಿದ್ದು, ಇದೀಗ ಇರಾಕ್‌ನ ಬಾಗ್ದಾದ್​​ನಲ್ಲಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.

2 rockets hit base where US troops are deployed in Iraq
ಅಮೆರಿಕ ರಾಯಭಾರಿ ಕಚೇರಿ ಮೇಲೆ ಕ್ಷಿಪಣಿ ದಾಳಿ

By

Published : Jan 4, 2020, 11:32 PM IST

Updated : Jan 4, 2020, 11:41 PM IST

ಬಾಗ್ದಾದ್​:ಇರಾಕ್​ ರಾಜಧಾನಿ ಬಾಗ್ದಾದ್​ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್​ ಎರಡು ರಾಕೆಟ್​ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.

ಅಮೆರಿಕ ವಾಯುಪಡೆಯ ದಾಳಿಗೆ ಇರಾನ್​ನ ಸೇನಾ ಮುಖ್ಯಸ್ಥ ಜನರಲ್ ಖಾಸಿಂ ಸೊಲೇಮನಿ ಸಾವನ್ನಪ್ಪಿದ ಬಳಿಕ ಯುದ್ಧ ಭೀತಿ ಎದುರಾಗಿದ್ದು, ಇಂದು ಬೆಳಗ್ಗೆ ಸಹ ಇರಾಕ್​ ಮೇಲೆ ಅಮೆರಿಕ ಸೇನೆ ವಾಯುದಾಳಿ ನಡೆಸಿ, ಕೆಲವರ ಸಾವಿಗೆ ಕಾರಣವಾಗಿದೆ. ಇದೀಗ ಯುಎಸ್​ ಸೇನೆ ತಂಗಿದ್ದ ಸ್ಥಳದಲ್ಲೇ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಯುಎಸ್​ ಸೇನೆ ಕಳೆದ ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಸೊಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್‌ ಮುಹಂದಿಸ್‌ ಇಬ್ಬರೂ ಬಲಿಯಾಗಿದ್ದರು. ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಇದೀಗ ಅದು ಮತ್ತೊಂದು ರೂಪ ಪಡೆದುಕೊಂಡಿದೆ.

Last Updated : Jan 4, 2020, 11:41 PM IST

ABOUT THE AUTHOR

...view details