ಬಾರಾಬಂಕಿ, (ಯುಪಿ) : ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಮುದ್ರಿಸಿರುವ ಟಿಕೆಟ್‌ಗಳನ್ನ ಪ್ರಯಾಣಿಕರಿಗೆ ನೀಡಿದ ಇಬ್ಬರು ರೈಲ್ವೆ ಸಿಬ್ಬಂದಿ ಅಮಾನತುಗೊಂಡಿರುವ ಘಟನೆ ಉತ್ತರಪ್ರದೇಶದ ಬಾರಾಬಂಕಿ ರೈಲ್ವೆ ಸ್ಟೇಷನ್‌ನಲ್ಲಿ ನಡೆದಿದೆ.
ಪ್ರಯಾಣಿಕರಿಗೆ ಮೋದಿ ಭಾವಚಿತ್ರವುಳ್ಳ ರೈಲ್ವೆ ಟಿಕೆಟ್.. ಇಬ್ಬರು ಸಿಬ್ಬಂದಿ ಸಸ್ಪೆಂಡ್! - undefined
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಷ್ಟಿದ್ದರೂ ಉತ್ತರಪ್ರದೇಶದ ಬಾರಾಬಂಕಿ ರೈಲ್ವೆ ಸ್ಟೇಷನ್‌ನಲ್ಲಿರುವ ರೈಲ್ವೆ ಸಿಬ್ಬಂದಿ ಕರ್ತವ್ಯಪ್ರಜ್ಞೆ ಮರೆತು ಕೆಲಸ ಮಾಡಿದ್ದಾರೆ.
![ಪ್ರಯಾಣಿಕರಿಗೆ ಮೋದಿ ಭಾವಚಿತ್ರವುಳ್ಳ ರೈಲ್ವೆ ಟಿಕೆಟ್.. ಇಬ್ಬರು ಸಿಬ್ಬಂದಿ ಸಸ್ಪೆಂಡ್!](https://etvbharatimages.akamaized.net/etvbharat/images/768-512-3016291-thumbnail-3x2-nin.jpg)
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಷ್ಟಿದ್ದರೂ ಉತ್ತರಪ್ರದೇಶದ ಬಾರಾಬಂಕಿ ರೈಲ್ವೆ ಸ್ಟೇಷನ್‌ನಲ್ಲಿರುವ ರೈಲ್ವೆ ಸಿಬ್ಬಂದಿ ಕರ್ತವ್ಯಪ್ರಜ್ಞೆ ಮರೆತು ಕೆಲಸ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಪ್ರಿಂಟಾಗಿರುವ ಟಿಕೆಟ್‌ಗಳನ್ನ ಪ್ರಯಾಣಿಕರಿಗೆ ನೀಡುತ್ತಿದ್ದರು. ಈ ಬಗ್ಗೆ ಪ್ರಯಾಣಿಕರೊಬ್ಬರು ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದರು.
'ಏಪ್ರಿಲ್ 13ರಂದು ಶಿಫ್ಟ್ ಅದಲು ಬದಲಾಗಿತ್ತು. ಹಳೆಯ ಪೇಪರ್ ರೂಲ್ ತಪ್ಪಾಗಿ ಬಳಸಲಾಗಿದೆ. ಈ ಬಗ್ಗೆ ಇಬ್ಬರು ಸಿಬ್ಬಂದಿಯನ್ನ ಸಸ್ಪೆಂಡ್ ಮಾಡಲಾಗಿದೆ. ಅಮಾನತುಗೊಂಡ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ಜಾರಿಯಲ್ಲಿದೆ' ಅಂತಾ ರೈಲ್ವೆ ಇಲಾಖೆ ಸಹಾಯಕ ವಿಭಾಗೀಯ ವ್ಯವಸ್ಥಾಪಕರು ಹೇಳಿದ್ದಾರೆ.