ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಗುಂಡಿನ ಕಾಳಗ: ಭಾರತೀಯ ಸೇನೆಯಿಂದ 2 ಪಾಕಿಸ್ತಾನಿ ಉಗ್ರರ ಹತ್ಯೆ - ಭಯೋತ್ಪಾದಕರ ಹತ್ಯೆ

ನೌಶೇರಾ ಸೆಕ್ಟರ್‌ನ ಎಲ್‌ಒಸಿ ಬಳಿ ಭಯೋತ್ಪಾದಕರು ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿದೆ. ಇನ್ನೊಬ್ಬ ಉಗ್ರ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆಯಿಂದ 2 ಪಾಕಿಸ್ತಾನಿ ಭಯೋತ್ಪಾದಕರ ಹತ್ಯೆ
ಭಾರತೀಯ ಸೇನೆಯಿಂದ 2 ಪಾಕಿಸ್ತಾನಿ ಭಯೋತ್ಪಾದಕರ ಹತ್ಯೆ

By

Published : Jul 29, 2020, 8:00 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಉಗ್ರರ ಒಳನುಸಳುವಿಕೆ ತಡೆಗಟ್ಟಲು ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಉಗ್ರರ ಒಳ ನುಸುಳುವಿಕೆ ದುಷ್ಕೃತ್ಯವನ್ನ ಯಶಸ್ವಿಯಾಗಿ ತಡೆಯಲಾಗಿದೆ.

ಇದೇ ವೇಳೆ, ಸೇನಾ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನ ಹೊಡೆದುರುಳಿಸಲಾಗಿದೆ. ಇನ್ನೊಬ್ಬ ಉಗ್ರ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಶೇರಾ ಸೆಕ್ಟರ್‌ನ ಎಲ್‌ಒಸಿ ಬಳಿ ಭಯೋತ್ಪಾದಕರು ಗುಂಡಿನ ಚಕಮಕಿ ನಡೆಸಿದರು. ಈ ವೇಳೆ, ಸೇನೆ ನಡೆಸಿದ ಗುಂಡಿನ ದಾಳಿ ನಡೆಸಿ ಒಳ ನುಸುಳುವಿಕೆಗೆ ಕಡಿವಾಣ ಹಾಕಿತು. ಈ ವೇಳೆ, ಉಗ್ರರು ಭಾರಿ ಪ್ರತಿರೋಧ ತೋರಿದ್ದಾರೆ. ಕೆಲವು ಸ್ಫೋಟಕಗಳನ್ನ ಸ್ಫೋಟಿಸಿ ಒಳನುಸುಳುವ ಪ್ರಯತ್ನ ಕೂಡಾ ಉಗ್ರರು ಮಾಡಿದ್ದಾರೆ.

ಈ ವೇಳೆ, ಸೇನೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಹತರಾದರೆ, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. "ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆ ಬೀಡು ಬಿಟ್ಟಿದ್ದು, ಉಗ್ರರಿಗಾಗಿ ಶೋಧ ಕಾರ್ಯ ಮುಂದುವರೆದಿದೆ" ಎಂದು ಸೇನಾ ಮೂಲವೊಂದು ತಿಳಿಸಿದೆ.

ABOUT THE AUTHOR

...view details