ಜೋಧ್‌ಪುರ (ರಾಜಸ್ಥಾನ):ಶ್ರೀಗಂಗನಗರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರು ಸಾವಿಗೀಡಾಗಿದ್ದಾರೆ.
ಪಾಕ್ನಿಂದ ಭಾರತಕ್ಕೆ ಡ್ರಗ್ಸ್ ಸಾಗಣೆ: ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಗಳ ಸಾವು - ಪಾಕಿಸ್ತಾನಿ ಕಳ್ಳಸಾಗಾಣಿಕೆದಾರ
ಶ್ರೀಗಂಗನಗರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಬಿಎಸ್ಎಫ್ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರು ಸಾವಿಗೀಡಾಗಿದ್ದಾರೆ. ನಿಖರ ಮಾಹಿತಿಯ ಮೇರೆಗೆ ಬಿಎಸ್ಎಫ್ ಕಾರ್ಯಾಚರಣೆ ನಡೆಸಿತ್ತು.
ಪಾಕ್ನಿಂದ ಭಾರತಕ್ಕೆ ಡ್ರಕ್ಸ್ ಸಾಗಣೆ
ಶ್ರೀಗಂಗನಗರ ಜಿಲ್ಲೆಯ ಗಡಿ ಹೊರಠಾಣೆ ಖಯಲಿವಾಲಾದಲ್ಲಿ ಈ ಘಟನೆ ಜರುಗಿದೆ. ಇವರ ಬಳಿ ಇದ್ದ ಪಿಸ್ತೂಲ್, ನಿಯತಕಾಲಿಕೆಗಳು, ಮದ್ದುಗುಂಡುಗಳು, ರಾತ್ರಿ ದೃಷ್ಟಿ ಸಾಧನ, ಪಾಕಿಸ್ತಾನಿ ಕರೆನ್ಸಿ ಮತ್ತು ಗುರುತಿನ ಚೀಟಿ, 8 ಕೆಜಿಯಷ್ಟು ಡ್ರಗ್ಸ್, ಒಂದು ಚಾಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ಎಫ್ ಇನ್ಸ್ಫೆಕ್ಟರ್ ಜನರಲ್ (ಐಜಿ) ಅಮಿತ್ ಲೋಧಾ ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಪಡೆದ ನಂತರ ಕಾರ್ಯಾಚರಣೆಗೆ ಇಳಿದ ಸಿಬ್ಬಂದಿ, ಪಾಕಿಸ್ತಾನದಿಂದ ಭಾರತಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದ ಇವರ ಮೇಲೆ ಕಾರ್ಯಾಚರಣೆ ನಡೆಸಿದೆ.
Last Updated : Sep 10, 2020, 5:55 AM IST