ಅಗರ್ತಲಾ:ತ್ರಿಪುರದಲ್ಲಿ ಸೋಮವಾರ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಇಬ್ಬರು ಯೋಧರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 154 ಕ್ಕೇರಿದೆ ಎಂದು ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ತಿಳಿಸಿದ್ದಾರೆ.
ತ್ರಿಪುರದಲ್ಲಿ ಇಬ್ಬರು ಬಿಎಸ್‌ಎಫ್ ಯೋಧರಿಗೆ ಕೊರೊನಾ ಪಾಸಿಟಿವ್ - ಇಬ್ಬರು ಬಿಎಸ್‌ಎಫ್ ಯೋಧರಿಗೆ ಕೊರೊನಾ ಪಾಸಿಟಿವ್
ಧಲೈ ಜಿಲ್ಲೆಯಲ್ಲಿ 750 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ವೇಳೆ ಇಬ್ಬರು ಬಿಎಸ್‌ಎಫ್ ಯೋಧರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ

ಧಲೈ ಜಿಲ್ಲೆಯಲ್ಲಿ 750 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಈ ವೇಳೆ ಇಬ್ಬರು ಬಿಎಸ್‌ಎಫ್ ಯೋಧರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಎಲ್ಲಾ ರೋಗಿಗಳು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಮಾತಾ ತ್ರಿಪುರ ಸುಂದರಿಯ ಆರ್ಶಿವಾದದಿಂದ ಶೀಘ್ರದಲ್ಲೇ ರಾಜ್ಯ ಕೊರೊನಾ ಮುಕ್ತವಾಗಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಸಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾನೂನು ಸಚಿವ ರತನ್ ಲಾಲ್ ನಾಥ್, ರಾಜ್ಯದಲ್ಲಿ ಕೊರೊನಾ ಪರೀಕ್ಷಾ ಮಟ್ಟವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ರಾಷ್ಟ್ರೀಯ ಸರಾಸರಿ ಮಿಲಿಯನ್‌ಗೆ 1,280 ಆಗಿದ್ದರೆ, ರಾಜ್ಯದಲ್ಲಿ ಮಿಲಿಯನ್‌ಗೆ 2,400 ಇದೆ. ಇದುವರೆಗೆ 10,344 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ, ಅದರಲ್ಲಿ 9,794 ಮಾದರಿಗಳ ಪರೀಕ್ಷೆ ಪೂರ್ಣಗೊಂಡಿವೆ ಎಂದು ಹೇಳಿದರು.