ಕರ್ನಾಟಕ

karnataka

ETV Bharat / bharat

ಶೋಪಿಯಾನ್ ಎನ್​ಕೌಂಟರ್​: ನಾಲ್ವರು ಉಗ್ರರು ಹತ, ಓರ್ವನ ಶರಣಾಗತಿ - ಕಿಲೋರ

ಶೋಪಿಯಾನ್ ಜಿಲ್ಲೆಯ ಕಿಲೋರ ಪ್ರದೇಶದಲ್ಲಿ ಎನ್​ಕೌಂಟರ್​​ ನಡೆಸಿ ನಾಲ್ವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ. ಓರ್ವ ಭಯೋತ್ಪಾದಕ ಶರಣಾಗಿದ್ದಾನೆ.

militants killed in Shopian encounter
ಶೋಪಿಯಾನ್ ಎನ್​ಕೌಂಟರ್​

By

Published : Aug 28, 2020, 5:42 PM IST

Updated : Aug 28, 2020, 7:43 PM IST

ಶ್ರೀನಗರ: ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಘಟನೆಯಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಗಿದೆ.

ಶೋಪಿಯಾನ್ ಜಿಲ್ಲೆಯ ಕಿಲೋರ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತ ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರು ಗುಂಡು ಹಾರಿಸಿದ್ದು, ಎನ್​ಕೌಂಟರ್​​ ನಡೆಸಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್‌ ಅಧಿಕಾರಿಯಾಗಿ ನೇಮಕಗೊಂಡು ಉಗ್ರ ಪಡೆ ಸೇರಿದ:

ಸಾವನ್ನಪ್ಪಿರುವ ಭಯೋತ್ಪಾದಕರಲ್ಲಿ ಶಕೂರ್​​ ಅಹ್ಮದ್​​ ಪ್ರಮುಖನಾಗಿದ್ದು, ಈತ ಪೊಲೀಸ್​​ ಅಧಿಕಾರಿ ಆಗಿ ನೇಮಕಗೊಂಡಿದ್ದನಂತೆ. ಈ ವೇಳೆ ನಾಲ್ಕು ಎಕೆ-47 ರೈಫಲ್​ಗಳೊಂದಿಗೆ ಪರಾರಿಯಾಗಿ, ಉಗ್ರ ಸಂಘಟನೆ ಸೇ ರಿದ್ದ ಎಂಬ ಮಾಹಿತಿ ದೊರೆತಿದೆ. ಈತ ರಚಿಸಿದ್ದ ಉಗ್ರ ಸಂಘಟನೆಗೆ 10 ಯುವಕರನ್ನು ಸೇರಿಸಿಕೊಂಡಿದ್ದ. ಇವರ ಪೈಕಿ ಹತ್ಯೆ ಐವರನ್ನು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Last Updated : Aug 28, 2020, 7:43 PM IST

ABOUT THE AUTHOR

...view details