ಚಂಡೀಗಢ(ಪಂಜಾಬ್):ಪಂಜಾಬ್‌ನ ತಾರ್ನ್ ತರಣ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆ ವೇಳೆ ಸಂಭವಿಸಿದ ಪಟಾಕಿ ಸ್ಫೋಟದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟರ್ನಲ್ಲಿದ್ದ ಪಟಾಕಿ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಾಯ - ಇಬ್ಬರು ಸಾವು ಹಲವರಿಗೆ ಗಾಯ
ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟ್ರರ್ನಲ್ಲಿದ್ದ ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಇಬ್ಬರು ಸಾವಿಗೀಡಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.
![ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟರ್ನಲ್ಲಿದ್ದ ಪಟಾಕಿ ಸ್ಫೋಟ: ಇಬ್ಬರ ಸಾವು, ಹಲವರಿಗೆ ಗಾಯ firecrackers explosion during religious procession,ಟ್ರಾಕ್ಟರ್ನಲ್ಲಿದ್ದ ಪಟಾಕಿ ಸ್ಫೋಟ](https://etvbharatimages.akamaized.net/etvbharat/prod-images/768-512-6005921-thumbnail-3x2-brm.jpg)
ಧಾರ್ಮಿಕ ಮೆರವಣಿಗೆ ವೇಳೆ ಟ್ರಾಕ್ಟರ್ನಲ್ಲಿದ್ದ ಪಟಾಕಿ ಸ್ಫೋಟ
ಧಾರ್ಮಿಕ ಮೆರವಣಿಗೆ ವೇಳೆ ಟ್ರಾಕ್ಟರ್ನಲ್ಲಿದ್ದ ಪಟಾಕಿ ಸ್ಫೋಟ
'ನಗರ್ ಕೀರ್ತನ' ಎಂಬ ಧಾರ್ಮಿಕ ಮೆರವಣಿಗೆ ವೇಳೆ ಟ್ರ್ಯಾಕ್ಟ್ರರ್ನಲ್ಲಿ ಪಟಾಕಿಗಳನ್ನ ಸಾಗಿಸಲಾಗುತ್ತಿತ್ತು. ತಾರ್ನ್ ತರಣ್ ಜಿಲ್ಲೆಯ ಪಹು ಗ್ರಾಮದ ಸಮೀಪ ಟ್ರ್ಯಾಕ್ಟರ್ನಲ್ಲಿದ್ದ ಪಾಟಾಕಿಗಳು ಸ್ಫೋಟಗೊಂಡಿವೆ.
ಮೆರವಣಿಗೆ ವೇಳೆ ಪಟಾಕಿಗಳನ್ನ ಸಿಡಿಸಲಾಗುತ್ತಿತ್ತು ಹೀಗೆ ಸಿಡಿದ ಪಟಾಕಿಯೊಂದು ಟ್ರ್ಯಾಕ್ಟರ್ ಟ್ರಾಲಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಪಟಾಕಿಗಳೆಲ್ಲ ಸ್ಪೋಟಗೊಂಡಿವೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 11 ಜನ ಗಾಯಗೊಂಡಿದ್ದಾರೆ, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದ್ದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.