ಕರ್ನಾಟಕ

karnataka

ETV Bharat / bharat

ದೀದಿ ನಾಡಲ್ಲಿ ಮತ್ತೆ ಹರಿಯಿತು ನೆತ್ತರು... ತುರ್ತು ಸಭೆ ಕರೆದ ಮಮತಾ ಬ್ಯಾನರ್ಜಿ

ಉತ್ತರ ಕೋಲ್ಕತ್ತಾದಲ್ಲಿ ನಡೆದ ಗಲಾಟೆಯಲ್ಲಿ ಕಚ್ಚಾ ಬಾಂಬ್​ ಎಸೆಯಲ್ಪಟ್ಟಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ.

ನೆತ್ತರು

By

Published : Jun 20, 2019, 4:55 PM IST

ಕೋಲ್ಕತ್ತಾ:ಪಶ್ಚಿಮ ಬಂಗಾಳ ಸದ್ಯ ಬೂದಿ ಮುಚ್ಚಿದ ಕೆಂಡವಾಗಿದ್ದು ಚುನಾವಣೆ ವೇಳೆ ಶುರುವಾಗಿದ್ದ ಗಲಾಟೆ ಇನ್ನೂ ನಿಂತಿಲ್ಲ. ಗುರುವಾರ ಮುಂಜಾನೆ ನಡೆದ ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಉತ್ತರ ಕೋಲ್ಕತ್ತಾದ ಭತ್ಪಾರದಲ್ಲಿ ನಡೆದಿದೆ.

ಸದ್ಯ ಈ ಘಟನೆಯನ್ನು ಗಂಭಿರವಾಗಿ ಪರಿಗಣಿಸಿರುವ ಪಶ್ಚಿಮ ಬಂಗಾಳ ಸರ್ಕಾರ ತುರ್ತು ಸಭೆಯನ್ನು ಕರೆದಿದೆ. ಸಿಎಂ ಮಮತಾ ಬ್ಯಾನರ್ಜಿ ಆದೇಶದ ಹಿನ್ನೆಲೆಯಲ್ಲಿ ಸಭೆ ಆಯೋಜನೆ ಮಾಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಗಲಾಟೆ

ಘಟನೆಯಲ್ಲಿ ಸಾವನ್ನಪ್ಪಿರುವ ಓರ್ವ 17 ವರ್ಷದ ರಾಂಬಾಬು ಶಾ ಎನ್ನಲಾಗಿದ್ದು, ಈ ಪಾನಿಪುರಿ ವ್ಯಾಪಾರಿ ಎಂದು ತಿಳಿದು ಬಂದಿದೆ. ಮತ್ತೋರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಗಾಯಗೊಂಡಿರುವ ಮೂವರು ಸ್ಥಿತಿಯೂ ಚಿಂತಾಜನಕವಾಗಿದೆ.

ಗಲಾಟೆಯಲ್ಲಿ ಕಚ್ಚಾ ಬಾಂಬ್​ ಎಸೆಯಲ್ಪಟ್ಟಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಉತ್ತರ ಕೋಲ್ಕತ್ತಾದ ಸಮೀಪದಲ್ಲಿ ನೂತನ ಕಟ್ಟಡ ಉದ್ಘಾಟಿಸುವ ಕಾರ್ಯಕ್ರಮಕ್ಕೂ ಕೆಲ ಗಂಟೆಗೆ ಮುನ್ನ ಈ ಗಲಾಟೆ ನಡೆದಿದೆ.

ABOUT THE AUTHOR

...view details