ಕರ್ನಾಟಕ

karnataka

ETV Bharat / bharat

'ರೈತ, ಜನ ವಿರೋಧಿ ಮಸೂದೆ'ಗಳೆಂದು ಕೇಂದ್ರದ ವಿರುದ್ಧವೇ ಅಬ್ಬರಿಸಿದ ಬಿಜೆಪಿ ನಾಯಕರು! - ರೈತರ ಪ್ರತಿಭಟನೆ

ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯು ಪ್ರತಿಕೂಲ ಪರಿಣಾಮ ಬೀರಿದೆ. ಆದರೆ, ಕೃಷಿ ಕ್ಷೇತ್ರವೇ ಸ್ವಲ್ಪ ಭರವಸೆಯಾಗಿ ಕಾಣುತ್ತಿದೆ. ಆದರೆ ಈಗ, ಈ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವಾಗ, ನಾವು ಅವರ ಧ್ವನಿಯನ್ನು ಕೇಳಬೇಕು ಎಂದು ಹರಿಯಾಣ ಬಿಜೆಪಿ ನಾಯಕರಾದ ಪರಮಿಂದರ್ ಸಿಂಗ್ ಧುಲ್ ಹೇಳಿದರು.

farmer
ರೈತರು

By

Published : Sep 25, 2020, 3:54 AM IST

ಚಂಡೀಗಢ್​:ಹರಿಯಾಣ ಬಿಜೆಪಿ ನಾಯಕರಾದ ಪರಮಿಂದರ್ ಸಿಂಗ್ ಧುಲ್ ಮತ್ತು ರಾಂಪಾಲ್ ಮಜ್ರಾ ಅವರು ಇತ್ತೀಚೆಗೆ ತಮ್ಮದೆ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆಗಳು ರೈತ ವಿರೋಧಿ ಎಂದು ಕರೆದು, ಕನಿಷ್ಠ ಬೆಂಬಲ ಬೆಲೆಯ ಬಗೆಗಿನ ಆತಂಕಗಳು ಆಧಾರರಹಿತ ಎಂದು ಹೇಳಿಕೆ ನೀಡಿದ್ದಾರೆ.

ಇಬ್ಬರು ಮಾಜಿ ಶಾಸಕರು ಮಾತನಾಡಿ, ಕೇಂದ್ರದ ಕೃಷಿ ಸುಧಾರಣೆಗಳ ಕಾಯ್ದೆ ವಿರುದ್ಧ ಅನೇಕ ರೈತ ಸಂಘಟನೆಗಳು ಪ್ರತಿಭಟಿಸುತ್ತಿವೆ. ಅವರ ಧ್ವನಿಯನ್ನು ನಾವು ಕೇಳಬೇಕಿದೆ ಎಂದು ಹೇಳಿದರು.

ಈ ಮಸೂದೆಗಳು ರೈತ ವಿರೋಧಿಗಳು. ಜನ ವಿರೋಧಿಗಳು. ಈ ಸುಧಾರಣೆಗಳು ರೈತರ ಸಂಕಷ್ಟಗಳಿಗೆ ಕಾರಣವಾಗಲಿವೆ ಎಂದು ಪರಿಗಣಿಸಲ್ಪಟ್ಟ ಛೋತು ರಾಮ್ ಅವರ ಕನಸುಗಳಿಗೆ ಹೊಡೆತ ನೀಡುತ್ತವೆ. ರೈತರನ್ನು ಸಮೃದ್ಧ ಮತ್ತು ಸಂತೋಷದಿಂದ ನೋಡಬೇಕೆಂದು ಬಯಸಿದ್ದರು ಎಂದು ಧುಲ್ ಹೇಳಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ, ಕೃಷಿ ಕ್ಷೇತ್ರವೇ ಸ್ವಲ್ಪ ಭರವಸೆಯಾಗಿ ಕಾಣುತ್ತಿದೆ. ಆದರೆ ಈಗ, ಈ ಮಸೂದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವಾಗ, ನಾವು ಅವರ ಮಾತುಗಳನ್ನು ಕೇಳಬೇಕಿದೆ ಎಂದರು.

ರಾಜ್ಯ ಬಿಜೆಪಿ ಮುಖ್ಯಸ್ಥ ಒ.ಪಿ. ಧಂಕರ್ ಅವರೊಂದಿಗೆ ಸಭೆ ನಡೆಸಿ, ಮತ್ತೊಂದು ಮಸೂದೆ ತರಬೇಕು ಎಂದು ಮನವಿ ಮಾಡಿದ್ದೇವೆ. ಅದು ಎಂಎಸ್​​ಪಿಗಿಂತ ಕಡಿಮೆಯಾಗಿ ಯಾರೂ ಬೆಳೆ ಸಂಗ್ರಹಿಸುವುದಿಲ್ಲ ಎಂಬುದನ್ನು ಖಾತರಿಪಡಿಸುತ್ತದೆ ಎಂದು ತಿಳಿಸಿದರು.

ABOUT THE AUTHOR

...view details